ನ್ಯೂಯಾರ್ಕ್,ಆ.17 (Daijiworld News/RD): ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮನ ನೀಡಿದ ಆರ್ಟಿಕಲ್ 370ನ್ನು ರದ್ದುಗೊಳಿಸಿದ್ದು, ಇದು ಪಾಕಿಸ್ತಾನದ ಮೈ ಮೆಲೆ ಬರೆ ಎಳೆದಂತೆ ಆಗಿದ್ದು, ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮನವಿ ನೀಡಿದ ಪಾಕಿಸ್ತಾನ. ಈ ಮನವಿಗೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆ , 370 ರದ್ಧತಿ ಭಾರತದ ಆಂತರಿಕ ವಿಚಾರವಾಗಿದ್ದು, ಇದರಲ್ಲೇ ಮೂರನೇಯವರ ಭಾಗಿಯಾಗುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, ಆ ಬಳಿಕ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಸುದ್ದಿಗಾರರೊಂದಿಗೆ ಮಾತನಾಡಿ, ಕಾಶ್ಮೀರಕ್ಕ ಸಂಬಂಧಪಟ್ಟ ಆರ್ಟಿಕಲ್ 370 ರ ರದ್ಧತಿ ಭಾರತದ ಆಂತರಿಕ ವಿಚಾರವಾಗಿದ್ದು, ಇದರಲ್ಲೇ ಮೂರನೇಯವರ ಭಾಗಿಯಾಗಿ ಇತ್ಯರ್ಥ ಮಾಡುವ ಅವಶ್ಯಕತೆ ಇಲ್ಲ. ಜಮ್ಮು, ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದೆ. ಈ ಭಾಗದ ಪ್ರಜೆಗಳಿಗೆ ಉತ್ತಮ ಆಡಳಿತ ಕಲ್ಪಿಸಿ ಕೊಡುವುದು ಭಾರತದ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಉಗ್ರ ಚಟುವಟಿಕೆಗಳನ್ನು ಆ ಪ್ರದೇಶದಲ್ಲಿ ನಿಯಂತ್ರಿಸುವುದು ಮುಖ್ಯವಾಗಿದೆ. ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಭಾರತ ಈ ನಿರ್ಣಯ ಕೈಗೊಂಡಿದೆ. ಹಾಗಾಗಿ ಇದು ಭಾರತದ ಆತಂರಿಕ ವಿಚಾರವಾಗಿದೆ ಇದು ಬಾಹ್ಯ ವಿಚಾರವಲ್ಲ, ಇದರಿಂದ ಇತರ ರಾಷ್ಟ್ರಗಳಿಗೆ ಯಾವುದೇ ಪರಿಣಾಮ ಬೀಳುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧಗಳ ಕುರಿತು ಮಾತನಾಡಿದ ಅಕ್ಬರುದ್ದೀನ್, ಇದೀಗ ಕಾಶ್ಮೀರದಲ್ಲಿ ಉಗ್ರರ ದಾಳಿಗಳಿಂದ ಲ್ಲಿನ ಜನರನ್ನು ರಕ್ಷಿಸುವ ಸಲುವಾಗಿ ಕೆಲ ನಿರ್ಬಂದಗಳನ್ನು ಹೇರಲಾಗಿದ್ದು, ಪರಿಸ್ಥಿತಿ ಸುಧಾರಿಸಿದ ಬಳಿಕ ಹಂತ ಹಂತವಾಗಿ ಈ ನಿರ್ಬಂಧಗಳನ್ನು ತೆರವುಗೊಳಿಸುತ್ತೇವೆ. ಹಾಗಾಗಿ ಈ ಎಲ್ಲಾ ಕ್ರಮಗಳು ಭಾರತದ ಆಂತರಿಕ ವಿಚಾರವಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಇತರ ರಾಷ್ಟ್ರಗಳು ಮಧ್ಯ ಪ್ರವೇಶಿಸಿ ಈ ವಿಚಾರವನ್ನು ತಿರುಚಿ ತಪ್ಪು ಮಾಹಿತಿ ನೀಡುವ ಅವಶ್ಯಕತೆ ಇಲ್ಲ ಎಂದು ನೇರವಾಗಿಯೇ ಪಾಕಿಸ್ತಾನದ ಮೇಲೆ ಹರಿಹಾಯ್ದರು.