ಲಂಡನ್,ಆ.11(Daijiworld News/RD): ಇತ್ತೀಚೆಗೆ ಬ್ರಿಟನ್ ದೇಶದಲ್ಲಿ ಮೈದಾನವೊಂದರಲ್ಲಿ ಮಕ್ಕಳೊಂದಿಗೆ ಆಟವಾಡಲು ಹೋಗಿದ್ದ ಭಾರತದ ಪಂಜಾಬ್ ,ಮೂಲದ 10 ವರ್ಷದ ಬಾಲಕಿ ಮುನ್ಸಿಮರ್ ಕೌರ್ಗೆ ಸುತ್ತಲಿದ್ದ ಬ್ರಿಟನ್ನ ಮಕ್ಕಳು ಆಕೆಯೊಂದಿಗೆ ಆಟವಾಡಲು ನಿರಾಕರಿಸಿದ್ದು, ಮಾತ್ರವಲ್ಲದೆ 'ನಾವು ಉಗ್ರರೊಂದಿಗೆ ಆಟವಾಡುವುದಿಲ್ಲ' ಎಂದು ಹೇಳಿದ್ದಾರೆ.
ಇದರಿಂದ ನೊಂದಕೊಂಡ ಪುಟ್ಟ ಬಾಲಕಿ ಮುನ್ಸಿಮರ್ ಕೌರ್, ತನ್ನ ತಂದೆಯ ಟ್ವಿಟರ್ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿದ್ದು, ತನಗಾದ ಅವಮಾನವನ್ನು ವಿವರಿಸಿದ್ದಾಳೆ. ಇತರರ ಬಗ್ಗೆ ಕಾಳಜಿ ತೋರಿಸುವಂತಹ ಮಹತ್ವದ ಗುಣ ಸಿಖ್ಖರಲ್ಲಿ ಸಹಜವಾಗಿ ಇರುತ್ತದೆ. ಸಿಖ್ಖರಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ವಿಶಾಲ ಮನೋಭಾವ ಇದೆ. ಅವರಲ್ಲಿನ ವಿಶಾಲವಾದ ಜ್ಞಾನ ಇನ್ನೂ ಹರಡಬೇಕಿದೆ. ಸಿಖ್ಖರ ಸಾಮಾರ್ಥ್ಯದ ಕುರಿತು ಸರಿಯಾಗಿ ಯಾರಿಗೂ ತಿಳಿದಿಲ್ಲ. ಹಾಗಾಗಿ ನಮ್ಮ ಬಗ್ಗೆ ನಾವು ಹೆಮ್ಮೆಪಡಬೇಕು, ಬ್ರಿಟನ್ನಲ್ಲಿರುವ ಈ ವರ್ಣಬೇಧ ನೀತಿಯನ್ನು ಪಾಲಿಸುವ ಬದಲು ಧಿಕ್ಕರಿಸಿ ಎದ್ದು ನಿಲ್ಲುಬೇಕು. ನಮ್ಮ ಬಗ್ಗೆ ವಿದೇಶಿಯರಿಗೆ ಇನ್ನೂ ಅರ್ಥ ಮಾಡಿಸಬೇಕಾದ ವಿಷಯ ಸಾಕಷ್ಟಿದೆ ಎಂದು ಮುನ್ಸಿಮರ್ ತನ್ನಂತೆ ಅವಮಾನವನ್ನು ಅನುಭವಿಸಿದ ಮಕ್ಕಳಿಗೆ ಈ ವೀಡಿಯೊದಲ್ಲಿ ಕಿವಿಮಾತು ಹೇಳಿದ್ದಾಳೆ.
ಪಾಕಿಸ್ತಾನವು ಬ್ರಿಟನ್ ದೇಶದ ಮೇಲೆ ಉಗ್ರರ ದಾಳಿಯನ್ನು ನಡೆಸುತ್ತಿದ್ದು, ಹೀಗಾಗಿ ಅಲ್ಲಿನ ಭಾರತೀಯ ಪ್ರಜೆಗಳನ್ನು ಕೂಡ ಉಗ್ರರೆಂದು ಬಿಂಬಿಸಿ, ಅವಮಾನಿಸುವ ವರ್ಣಬೇಧ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಕಾಣಬಹುವುದು. ಇದಕ್ಕಾಗಿ ಈ ಬಾಲಕಿ ಟ್ವೀಟರ್ ನಲ್ಲಿ ಈ ಬಗೆಗಿನ ವೀಡಿಯೊವನ್ನು ಶೇರ್ ಮಾಡುವ ಮೂಲಕ ಉತ್ತಮ ಸಂದೇಶ ನೀಡಿದ್ದಾಳೆ.