ಅಮೆರಿಕ, ಆ 4 (Daijiworld News/RD): ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಶಾಪಿಂಗ್ ಮಾಲ್ ನಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ಘಟನೆಯಲ್ಲಿ ಸುಮಾರು 20 ಜನರು ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ದಾಳಿಗೆ ಸಂಬಂಧಪಟ್ಟಂತೆ ಒಬ್ಬಾತ ಫೇಸ್ಬುಕ್ ಖಾತೆಯಲ್ಲಿ ಈ ದಾಳಿಯ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದು ಇದನ್ನು ಗಮನಿಸಿದ ಪೊಲೀಸರು, ಆ ಪೋಸ್ಟ್ ಮಾಡಿರುವ ವ್ಯಕ್ತಿಯೇ ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ 21 ವರ್ಷದ ಗನ್ಮ್ಯಾನ್ ಪ್ಯಾಟ್ರಿಕ್ ಕ್ರೂಸಿಯಸ್ ನ್ನು ಬಂಧಿಸಲಾಗಿದೆ.
ವೀಕೆಂಡ್ ದಿನದಂದು ಟೆಕ್ಸಾಸ್ನ ಶಾಪಿಂಗ್ ಕಾಂಪ್ಲೆಕ್ಷನಲ್ಲಿ ಸುಮಾರು 3 ಸಾವಿರ ಜನ ಸೇರಿದ್ದು. ಯುವಕನೊಬ್ಬ ಎಕೆ 47 ಗನ್ ಹಿಡಿದುಕೊಂಡು ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಟೆಕ್ಸಾಸ್ ಗರ್ವನರ್, ಟೆಕ್ಸಾಸ್ ಇತಿಹಾಸದಲ್ಲಿ ಇದೊಂದು ದುರಂತ ಘಟನೆಯಾಗಿದ್ದು, ನಗರದ ಸುತ್ತಾ ಇಂದು ಕರಾಳ ದಿನವಾಗಿದೆ. ಈ ಘಟನೆಯು ಭಯಾನಕ ವಾತಾವರಣವನ್ನು ಸೃಷ್ಠಿಸಿದೆ. ಅಮೆರಿಕದ ಇತಿಹಾಸದಲ್ಲಿ ಈ ಘಟನೆಯು 8ನೇ ಗೋಲಿಬಾರ್ ಇದಾಗಿದೆ. 1984 ರಲ್ಲಿ ಸ್ಯಾನ್ ವೈಸಿಡ್ರೋನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 21 ಜನರು ಮೃತಪಟ್ಟಿದ್ದರು ಎಂದು ಹೇಳಿದ್ದಾರೆ. ಕಳೆದ ವಾರ ಕ್ಯಾಲಿಫೋರ್ನಿಯದಲ್ಲಿ ಇದೇ ರೀತಿಯ ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು ಎನ್ನಲಾಗಿದೆ.
ಈ ಘಟನೆಗೆ ಸಂಬಂಧಪಟ್ಟಂತೆ ಕಾನೂನಿನ ಪ್ರಕಾರ ಎಲ್ಲಾ ರೀತಿಯ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು ಈ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಟೆಕ್ಸಾಸ್ನಲ್ಲಿ ನಡೆದ ಈ ದಾಳಿಯು ತೀವ್ರ ನೋವುಂಟು ಮಾಡಿದೆ. ಈಗಾಗಲೇ ಹಲವಾರು ಮಂದಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ತಿಳಿದಿದೆ. ಈ ಕುರಿತು ಟೆಕ್ಸಾಟ್ ಗವರ್ನರ್ ಜೊತೆ ಮಾತನಾಡಿದ್ದೇನೆ. ಫೆಡರಲ್ ಸರ್ಕಾರ ಸಹಾಯ ಮಾಡಲಿದ್ದು, ದೇವರು ನಿಮ್ಮೊಂದಿಗಿದ್ದಾನೆ ಎಂದು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟ್ವಿಟ್ಟರ್ ನಲ್ಲಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.