ಪಾಕಿಸ್ತಾನ, ಆ 2(Daijiworld News/RD): ಭಾರತೀಯ ಕಂಪೆನಿಯ ಒಳಉಡುಪನ್ನು ಧರಿಸಿದ ರಾಜು ಲಕ್ಷ್ಮಣ್, ಭಾರತದ ಗೂಢಾಚಾರನೆಂಬ ಶಂಕೆ ಪಾಕಿಸ್ತಾನಕ್ಕೆ ವ್ಯಕ್ತವಾಗಿದ್ದು, ಹೀಗಾಗಿ ಆತನನ್ನು ಪಾಕ್ನ ಪಂಜಾಬ್ ಪ್ರಾಂತ್ಯದ ಡೇರಾ ಗಾಜಿ ಖಾನ್ ಜಿಲ್ಲೆಯ ರಾಖಿ ಪ್ರದೇಶದಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿ ಭಾರತೀಯ ಮೂಲದ ರಾಜು ಲಕ್ಷ್ಮಣ್ ಆಗಿದ್ದು, ಈತ ಪಂಜಾಬ್ ಪ್ರಾಂತ್ಯದ ಪರಮಾಣು ಕೇಂದ್ರದ ಬಗ್ಗೆ ಬೇಹುಗಾರಿಕೆ ನಡೆಸಿದ ಎಂದು ಪಾಕಿಸ್ತಾನ ಆರೋಪ ಹೊರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಲಕ್ಷ್ಮಣ್ ಗೂಢಾಚಾರಿ ಎನ್ನುವುದಕ್ಕೆ ಸಾಕ್ಷಿಯನ್ನು ಬಹಿರಂಗ ಪಡಿಸಿದೆ. ಭಾರತದ ಲಕ್ಷ್ಮಣ್ ರಾಜ್ ಲಕ್ಸ್ ಕೋಜಿಯ ಒಳ ಉಡುಪನ್ನು ಧರಿಸಿದ್ದ ಎಂದು ಹೇಳಿದೆ.
ಈಗಾಗಲೇ ಬೇಹುಗಾರಿಕೆ ಮತ್ತು ಭಯೋತ್ಪಾದನೆಯ ಆರೋಪದಲ್ಲಿ ಕಳೆದ 3 ವರ್ಷಗಳಿಂದ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಯೋಧ ಕುಲಭೂಷಣ್ ಜಾಧವ್, ಪಾಕ್ ಮರಣದಂಡನೆಯನ್ನು ಶಿಕ್ಷೆಯನ್ನು ನೀಡಿತ್ತು, ಈ ಶಿಕ್ಷೆಯನ್ನು ಕೋರ್ಟ ಅಮನತುಗೊಳಿಸುವ ಮೂಲಕ ಭಾರತಕ್ಕೆ ರಾಜತಾಂತ್ರಿಕ ಗೆಲವು ಸಿಕ್ಕಿತು. ಇದೀಗ ಪಾಕ್ ಮತ್ತೊಂದು ಸಮಸ್ಯೆಯನ್ನು ಸೃಷ್ಠಿಸಿದ್ದು, ಭಾರತದ ಗೂಢಚಾರನೆಂಬ ಶಂಕೆಯಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದೆ.