ಕಾಬೂಲ್, ಜು 28 (Daijiworld News/RD): ಅಮೆರಿಕ ನೇತೃತ್ವದ ವೈಮಾನಿಕ ದಾಳಿ ಅಫ್ಘಾನಿಸ್ತಾನದ ಮಧ್ಯ ಘಜ್ನಿ ಪ್ರಾಂತ್ಯದಲ್ಲಿ ನಡೆದಿದ್ದು, ಈ ದಾಳಿಗೆ ಸುಮರು 20 ತಾಲಿಬಾನ್ ಉಗ್ರರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ.
ಈಗಗಲೇ ಕತಾರ್ನಲ್ಲಿ ಅಮೆರಿಕ ಮತ್ತು ತಾಲಿಬಾನ್ ಶಾಂತಿ ಮಾತುಕತೆ ನಡೆಸುತ್ತಿದ್ದು, ಇದು ಎರಡು ದಿನಗಳ ಕಾಲ ಸ್ಥಗಿತಗೊಂಡಿತ್ತು. ಈ ಮತುಕತೆ ಸ್ಥಗಿತಗೊಂಡ ಬಳಿಕ ಈ ಕಾರ್ಯಾಚರಣೆ ನಡೆದಿದ್ದು ಸುಮಾರು 20 ರಷ್ಟು ಉಗ್ರರರನ್ನು ಕೊಲ್ಲಲಾಗಿದೆ ಎಂದು ತಿಳಿಸಿವೆ.
ಆಮೇರಿಕಾದ ಮುಂದಾಳತ್ವದಲ್ಲಿ ಈ ದಾಳಿ ನಡೆದಿದ್ದು, ಅಫ್ಘಾನಿನ, ಖರಾಬಾಗ್ ಜಿಲ್ಲೆಯ ಸೈಯದ್ ವಾಲಿ ಮತ್ತು ಮಾರ್ವಾರ್ಡಾ ಪ್ರದೇಶಗಳಲ್ಲಿ ತಾಲಿಬಾನ್ ಉಗ್ರರನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದೆ.