ನ್ಯೂಯಾರ್ಕ್, ಜು 22 (Daijiworld News/RD): ಫ್ಲೋರಲ್ ಪಾರ್ಕಿನ ಗ್ಲೆನ್ ಓಕ್ಸ್ ಬಳಿಯಿರುವ ಶಿವ ಶಕ್ತಿ ಪೀಠದ ಬಳಿ ಬರುತ್ತಿದ್ದ ಸ್ವಾಮಿ ಹರೀಶ್ ಚಂದೇರ್ ಪುರಿ ಮೇಲೆ 52 ವರ್ಷದ ಅಮೆರಿಕ ಪ್ರಜೆಯೊಬ್ಬರು ದಾಳಿ ನಡೆಸಿದ್ದಾರೆ.
ಅರ್ಚಕರನ್ನು ಹಿಂಬಾಲಿಸಿ ಬಂದು ಅಮೆರಿಕ ಪ್ರಜೆ ಸೆರ್ಗಿಯೊ ಗೌವಿಯಾ ದಾಳಿ ನಡೆಸಿದ ಎನ್ನಲಾಗಿದೆ. ಆರೋಪಿ ಸೆರ್ಗಿಯೊನನ್ನು ಈಗಾಗಲೇ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡೆಮಾಕ್ರೆಟಿಕ್ ಸಂಸದರಾದ ಸೊಮಾಲಿ ಮೂಲದ ಇಲ್ಹನ್ ಒಮರ್ ಸೇರಿದಂತೆ ನಾಲ್ವರು ವಿದೇಶಿ ಮೂಲದ ಸಂಸದರಿಗೆ ಅಮೆರಿಕ ಈಗಾಗಲೇ ತೊರೆಯುವಂತೆ ಹೇಳಿದ ಅಮೇರಿಕ ಅಧ್ಯಕ್ಷ. ವಿದೇಶಿ ಮೂಲದವರು ನಮ್ಮ ದೇಶವನ್ನು ತೊರೆದರೆ ನಮ್ಮ ದೇಶದ ಮುಕ್ತ, ಸ್ವಚ್ಛ ಹಾಗೂ ಯಶಸ್ವಿಯಾದ ರಾಷ್ಟ್ರವಾಗಿ ಬೆಳೆಯುತ್ತದೆ. ಒಂದು ವೇಳೆ ನಮ್ಮ ರಾಷ್ಟ್ರವನ್ನು ಕಂಡು ನಿಮಗೆ ಆಗದಿದ್ದರೆ, ಕೂಡಲೇ ನಿಮ್ಮ ಮೂಲಸ್ಥಾನಕ್ಕೆ ತೆರಳಬಹುದು ಎಂದು ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಬಳಿಕ ಈ ಘಟನೆ ನಡೆದಿದ್ದು, ಜನಾಂಗೀಯ ದ್ವೇಷದಿಂದಾಗಿ ಈ ದಾಳಿ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅರ್ಚಕರ ದೇಹದ ಮೇಲೆ ಪರಚಿದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.