ಕಾಬೂಲ್, ಜು 21(Daijiworld News/RD): ಅಫ್ಘಾನಿನ ವಾಯುಸೇನೆಯ ಎ-26 ಯುದ್ಧ ವಿಮಾನವು ಅಫ್ಘಾನಿಸ್ತಾನದ ಫರಿಯಾಬ್ ಪ್ರ್ಯಾಂತದಲ್ಲಿರುವ ತಾಲಿಬಾನ್ ಉಗ್ರರ ನೆಲೆಯ ಮೇಲೆ ಏರ್ ಸ್ಟ್ರೈಕ್ ದಾಳಿ ನಡೆಸಿದೆ. ಈ ದಾಳಿಯಲ್ಲಿ 28 ತಾಲಿಬಾನ್ ಉಗ್ರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ಸೇನೆಯನ್ನು ಗುರಿಯಾಗಿಸಿ ದಾಳಿಗೆ ಸಂಚು ನಡೆಸಿದ ತಾಲಿಬಾನ್ ಉಗ್ರರು, ಈ ಮಾಹಿತಿ ಅರಿತು ಉಗ್ರರರು ಕಂಡುಕೊಂಡಿದ್ದ ನೆಲೆಯನ್ನು ಪತ್ತೆ ಹಚ್ಚಿ, ಛಿಧ್ರಗೊಳಿಸುವ ಮೂಲಕ ಅಫ್ಘಾನಿ ಸೇನೆಯು ಯಶಸ್ವಿಯಾಯಿತು.
ಸೇನೆಯು ಶನಿವಾರವು ಮಿಸೈಲ್ ದಾಳಿ ನಡೆಸಿದ್ದು, ಇದರಲ್ಲಿ 28 ತಾಲಿಬಾನ್ ಉಗ್ರರು ಬಲಿಯಾಗಿದ್ದು, 28 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಸೇನೆ ಮಾಹಿತಿ ನೀಡಿದೆ.
ಅಫ್ಘಾನಿನ ಉತ್ತರ ಭಾಗದಲ್ಲಿ ಉಗ್ರರ ಉಪಟಳದಿಂದ ಹಿಂಸಾಚಾರ ಕಳೆದ ಹಲವು ವರ್ಷಗಳಿಂದ ಹೆಚಾಗಿದ್ದು, ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಉಗ್ರವಾದವನ್ನು ಸಂಪೂರ್ಣ ನಿಯಂತ್ರಿಸಿತು. ಇದರಿಂದ ತತ್ತರಗೊಂಡ ಉಗ್ರರು ಉತ್ತರ ಭಾಗದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಅಫ್ಘಾನಿನ ವಾಯುಸೇನೆಯು ಸುಲಭವಾಗಿ ಉಗ್ರರ ನೆಲೆಯನ್ನು ಪತ್ತೆಹಚ್ಚಿ ದಾಳಿ ನಡೆಸಿದೆ.