ನವದೆಹಲಿ, ಜು 17 (Daijiworld News/SM): ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಪಾಕಿಸ್ತಾನ ಸರಕಾರ ಬಂಧಿಸಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷನ್ ಜಾಧವ್ ಅವರ ತೀರ್ಪು ಭಾರತದ ಪರವಾಗಿ ಪ್ರಕಟಗೊಂಡಿದೆ.
ಕುಲಭೂಷಣ್ ಜಾಧವ್ ಅವರಿಗೆ ಪಾಕ್ ಸೇನಾ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಅಮಾನತು ಮಾಡಿದೆ. 16 ಜಡ್ಜ್ಗಳ ಪೈಕಿ 15 ಜಡ್ಜ್ ಗಳು ಭಾರತದ ಪರ ತೀರ್ಪು ನೀಡಿದ್ದಾರೆ. ಕುಲಭೂಷನ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲು ಪಾಕ್ ಆದೇಶ ನೀಡಿತ್ತು. ಆದರೆ, ಗಲ್ಲು ಶಿಕ್ಷೆಯನ್ನ ಮರುಪರಿಶೀಲನೆ ನಡೆಸುವಂತೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕೋರ್ಟ್ ಸೂಚನೆ ನೀಡಿದೆ.
ಕುಲಭೂಷಣ್ ಪ್ರಕರಣದಲ್ಲಿ ಪಾಕ್ ವಿಯನ್ನಾ ಒಪ್ಪಂದದ ನಿಯಮಗಳನ್ನ ಉಲ್ಲಂಘನೆ ಮಾಡಿದೆ. ಕುಲಭೂಷಣ್ ಜಾಧವ್ ಅವರಿಗೆ ಪಾಕ್ ಸರಕಾರದಿಂದ ಯಾವುದೇ ಕಾನೂನು ನೆರವು ಸಿಕ್ಕಿಲ್ಲ. ಅವರಿಗೆ ಗಲ್ಲು ಶಿಕ್ಷೆ ವಿಧಿಸುವುದು ಒಂದೇ ಪಾಕಿಸ್ತಾನದ ಇಂಗಿತವಾಗಿತ್ತು. ಭಾರತ ಕುಲಭೂಷನ್ ಪರ ಹಲವು ಮನವಿ ಮಾಡಿದರೂ ಪಾಕ್ ಅವರಿಗೆ ನೆರವು ನೀಡಿಲ್ಲ ಎಂಬುವುದು ವಾದ ಪ್ರತಿವಾದಗಳಿಂದ ಸಾಬೀತಾಗಿದೆ.