ಲಂಡನ್, ಜು03(Daijiworld News/SS): ಗಡಿಪಾರು ಪ್ರಕ್ರಿಯೆ ಎದುರಿಸುತ್ತಿರುವ ವಿಜಯ್ ಮಲ್ಯಗೆ ಬ್ರಿಟನ್ ಹೈಕೋರ್ಟ್ ತುಸು ನಿರಾಳತೆ ನೀಡಿದ್ದು, ಗಡಿಪಾರು ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಅವಕಾಶ ನೀಡಿದೆ.
ಕಳೆದ ಏಪ್ರಿಲ್ನಲ್ಲಿ ಮಲ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್ನ ಅಡ್ಮಿನಿಸ್ಟ್ರೇಟಿವ್ ಕೋರ್ಟ್ ವಿಚಾರಣೆ ನಡೆಸಿದೆ. ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ನೀಡಿದ್ದ ಗಡಿಪಾರು ಆದೇಶ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಲು ದ್ವಿಸದಸ್ಯ ನ್ಯಾಯಪೀಠ ಅವಕಾಶ ನೀಡಿದೆ.
ಇದರಿಂದ ಈ ಪ್ರಕರಣ ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಮೇಲ್ಮನವಿಗೆ ಹೈಕೋರ್ಟ್ ಅವಕಾಶ ನೀಡದೆ ಇದ್ದಲ್ಲಿ 28 ದಿನಗಳೊಳಗಾಗಿ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕಾಗುತ್ತಿತ್ತು.
ಮಲ್ಯ ವಿರುದ್ಧ 9000 ಕೋಟಿ ರೂ. ಹಣ ವಂಚನೆ ಮತ್ತು ಎಫ್ಇಎಂಎ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ.