ಒಸಾಕಾ, ಜೂ 29 (Daijiworld News/MSP): ದೇಶದ ಅಭಿವೃದ್ದಿ, ಭಯೋತ್ಪಾದನೆ ವಿರುದ್ದ ಹೋರಾಟ ವಾಣಿಜ್ಯ ಸಮರಕ್ಕೆ ತೆರೆ ಎಳೆಯುವ ಗುರಿ ಮುಂತಾದ ಉದ್ದೇಶವನ್ನು ಇಟ್ಟುಕೊಂಡು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಗೆ ಜಿ-20 ಶೃಂಗ ಸಭೆಯಲ್ಲಿ ಮೊದಲ ದಿನವೇ ನಿರೀಕ್ಷೆಗೂ ಮೀರಿ ಫಲ ಸಿಕ್ಕಿದೆ.
ಜಪಾನ್ನ ಜಿ-20 ಶೃಂಗ ಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ದೇಶದ ದಿಗ್ಗಜ ನಾಯಕರು ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ ಪ್ರಧಾನಿಯೂ ಹೊರತಾಗಿಲ್ಲ.
ಹೌದು ಜಾಗತಿಕ ನಾಯಕನಾಗಿ ಮಿಂಚುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕೋಟ್ ಮೊರಿಸನ್ ಅವರು ಸೆಲ್ಫಿ ತೆಗೆದುಕೊಂಡು " ಕಿತ್ನಾ ಅಚ್ಛಾ ಹೇ ಮೋದಿ " ಎಂದು ಮಾಡಿರುವ ಟ್ವೀಟ್ ವೈರಲ್ ಆಗಿದೆ.
ಸಧ್ಯ ಈ ಟ್ವೀಟ್ ವೈರಲ್ ಆಗಿದೆ. ಮಾತ್ರವಲ್ಲದೆ ಟ್ವೀಟ್ ಮಾಡಿದ ಬೆನ್ನಲ್ಲೇ ಕಮೆಂಟ್ಗಳ ಮಹಾಪೂರವೇ ಹರಿದು ಬಂದಿದೆ.