ಬೀಜಿಂಗ್ ,ಜೂ 22 (Daijiworld News/MSP): ಉಗ್ರ ಮಸೂದ್ ಅಜರ್ಗೆ ಅಂತಾರಾಷ್ಟ್ರೀಯ ನಿಷೇಧ ಹೇರುವ ಕುರಿತು ಈವರೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಚೀನ ಇದೀಗ ಎನ್ ಎಸ್ ಜಿ ಸದಸ್ಯತ್ವದ ವಿಚಾರವಾಗಿ ಭಾರತದ ವಿರುದ್ದ ಕ್ಯಾತೆ ತೆಗೆದಿದೆ.
ಭಾರತದ ಪರಮಾಣು ಪೂರೈಕೆ ಗುಂಪಿನ (ಎನ್ಎಸ್ಜಿ) ಸದಸ್ಯತ್ವಕ್ಕೆ ಅಡ್ಡಗಾಲು ಹಾಕಿರುವ ಚೀನಾ ಅಣ್ವಸ್ತ್ರ ನಿಶ್ಶಸ್ತ್ರೀಕರಣದ ಕುರಿತು ಸಹಿ ಹಾಕಿರುವ ರಾಷ್ಟ್ರಗಳನ್ನು ಮಾತ್ರ ಎನ್ ಎಸ್ ಜಿ ಗೆ ಹೊಸ ಸದಸ್ಯರನ್ನಾಗಿ ಸೇರ್ಪಡೆಗೊಳಿಸಬೇಕು ರಾಗ ತೆಗೆದಿದೆ.
ಎನ್ಎಸ್ಜಿಗೆ ಸದಸ್ಯತ್ವ ಕೋರಿ 2016ರಲ್ಲಿ ಭಾರತ ಅರ್ಜಿ ಸಲ್ಲಿಸಿತ್ತು. ಆದರೆ ಅಂದಿನಿಂದಲೂ ಚೀನ ಆಕ್ಷೇಪ ಎತ್ತುತ್ತಿದೆ. ಅಣ್ವಸ್ತ್ರ ನಿಶ್ಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿದರೆ ಮಾತ್ರವೇ ಎನ್ಎಸ್ಜಿ ಸದಸ್ಯತ್ವ ನೀಡಬೇಕು ಎಂದು ಚೀನ ಒತ್ತಡ ಹಾಕುತ್ತಿದೆ. ಆದರೆ ಭಾರತ ಇಲ್ಲಿಯತನಕ ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಅಂಕಿತ ಹಾಕಿಲ್ಲ.