ಲಂಡನ್, ಜೂ 21 (Daijiworld News/SM): ಪ್ರಧಾನಿ ನರೇಂದ್ರ ಮೋದಿಯವರನ್ನು ಇದೀಗ ಮತ್ತೊಮ್ಮೆ ಜಾಗತೀಕ ನಾಯಕ ಎಂದು ಸಾಬೀತಾಗಿದೆ. ಇಂಗ್ಲೆಂಡ್ ಮೂಲದ ಪ್ರತಿಷ್ಠಿತ ಬ್ರಿಟಿಷ್ ಮ್ಯಾಗಜೀನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ನಾಯಕ ಎಂಬುವುದಾಗಿ ಉಲ್ಲೇಖಿಸಲಾಗಿದೆ.
ಬ್ರಿಟಿಷ್ ಮ್ಯಾಗಜೀನ್ 2019ರಲ್ಲಿ ನಡೆಸಿದ್ದ ಓದುಗರ ಸಮೀಕ್ಷೆಯಲ್ಲಿ ವಿಶ್ವದ ಹಲವು ನಾಯಕರನ್ನು ಹಿಂದಿಕ್ಕಿರುವ ನರೇಂದ್ರ ಮೋದಿ ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾಗಿ ವರದಿ ತಿಳಿಸಿದೆ.
ಬ್ರಿಟಿಷ್ ಹೆರಾಲ್ಡ್ ಸಮೀಕ್ಷೆ ಪ್ರಕಾರ, ಜಗತ್ತಿನ ಹಲವು ನಾಯಕರು, ರಾಜಕೀಯ ಮುಖಂಡರನ್ನು ಸೋಲಿಸಿದ್ದು, ಮೋದಿ ಅವರನ್ನು ವಿಶ್ವನಾಯಕ ಎಂದು ಜಯಗಳಿಸಿರುವುದಾಗಿ ಘೋಷಿಸಿದೆ. ವಿಶ್ವದ ಪ್ರಭಾವಿ ನಾಯಕರ ಈ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶೇ.30.9ರಷ್ಟು ಮತ ಪಡೆದಿದ್ದಾರೆ.
ಬಳಿಕದ ಸ್ಥಾನ ರಷ್ಯಾ ಪಾಲಾಗಿದ್ದು ವ್ಲಾಡಿಮಿರ್ ಪುಟಿನ್ ಶೇ.29.9ರಷ್ಟು ಮತಗಳಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.21.9ರಷ್ಟು ಹಾಗೂ ಚೀನಾದ ಕ್ಸಿ ಜಿಂಗ್ ಪಿಂಗ್ ಶೇ.18.01ರಷ್ಟು ಮತ ಪಡೆದಿರುವುದಾಗಿ ವರದಿಯಲ್ಲಿ ಉಲ್ಲೇಖಗೊಂಡಿದೆ.
ಬ್ರಿಟಿಷ್ ಹೆರಾಲ್ಡ್ ಆಯೋಜಿಸಿದ್ದ ಓದುಗರ ಸಮೀಕ್ಷೆ ವಿಶ್ವದ 25 ನಾಯಕರನ್ನು ಆಯ್ಕೆ ಮಾಡಿದೆ. ಅದರಲ್ಲಿ ಅಂತಿಮವಾಗಿ ನಾಲ್ಕು ನಾಯಕರನ್ನು ತಜ್ಞರ ಸಮಿತಿ ಆಯ್ಕೆ ಮಾಡಿತ್ತು.