ಮೆಲ್ಬರ್ನ್, ಜೂ19(DaijiworldNews/AZM): ದಯಾಮರಣ ಕಾನೂನನ್ನು ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯವು ಇಂದು ಜಾರಿಗೆ ತಂದಿದ್ದು,. ಈ ಕಾನೂನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಇದಾಗಿದೆ.
ಈ ಕಾನೂನಿನ ಪ್ರಕಾರ, ಅಸಾಧ್ಯ ನೋವಿನಿಂದ ನರಳುತ್ತಿರುವ, ಚೇತರಿಸಿಕೊಳ್ಳುವ ಸಾಧ್ಯತೆಯಿರದ ರೋಗಿಗಳು ಮಾರಕ ಔಷಧಿಗಳನ್ನು ಕೊಟ್ಟು ತಮ್ಮ ಜೀವಗಳನ್ನು ಕೊನೆಗೊಳಿಸುವಂತೆ ತಮ್ಮ ವೈದ್ಯರನ್ನು ಕೋರಬಹುದಾಗಿದೆ.
ಸಹಿಸಲಾಗದ ನೋವಿನಿಂದ ಬಳಲುತ್ತಿರುವ ಹಾಗೂ 6 ತಿಂಗಳಿಗೂ ಕಡಿಮೆ ಕಾಲ ಬದುಕಲಿರುವ ಅಥವಾ 12 ತಿಂಗಳಿನಿಂದ ನರ ದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿರುವ, ಚೇತರಿಸಿಕೊಳ್ಳಲು ಸಾಧ್ಯವಿರದ ರೋಗಿಗಳು ದಯಾಮರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ದಯಾಮರಣಕ್ಕಾಗಿ 68 ಸುರಕ್ಷತಾ ಕ್ರಮಗಳನ್ನು ರೂಪಿಸಲಾಗಿದ್ದು ರೋಗಿಗಳು ಅವುಗಳನ್ನು ಪೂರೈಸಬೇಕಾಗಿದೆ.