ಲೋವಾ, ಜೂ 17(Daijiworld News/MSP): ಇಬ್ಬರು ಮಕ್ಕಳು ಸೇರಿದಂತೆ ಭಾರತ ಮೂಲದ ಒಂದೇ ಕುಟುಂಬದ ನಾಲ್ವರನ್ನು ಮನೆಯೊಳಗೆಯೇ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ವೆಸ್ಟ್ ಡೆಸ್ಮೊನೆಸ್ನಲ್ಲಿ ಶನಿವಾರ ನಡೆದಿದೆ.
ಮೃತರನ್ನು ದಂಪತಿಗಳ ಚಂದ್ರಶೇಖರ ಸುಂಕರ (44), ಲಾವಣ್ಯ ಸುಂಕರ (41) ಎಂದು ಗುರುತಿಸಲಾಗಿದೆ. ಈ ದಂಪತಿಯು 15 ಮತ್ತು 10 ವರ್ಷದ ಇಬ್ಬರು ಮಕ್ಕಳು ಗುಂಡಿಗೆ ಬಲಿಯಾಗಿದ್ದಾರೆ. ಇವರ ನಾಲ್ವರ ದೇಹದಲ್ಲೂ ಗುಂಡಿನ ಗಾಯಗಳಾಗಿದ್ದು ಗುಂಡು ಪತ್ತೆಯಾಗಿದೆ. ಶವ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಚಂದ್ರಶೇಖರ್ ಸುಂಕರಾ ಅವರು ಅಲ್ಲಿನ ಇಲಾಖೆಯ ಮಾಹಿತಿ ತಂತ್ರಜ್ಞಾನ ಘಟಕದಲ್ಲಿ 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಮನೆಯಲ್ಲಿ ವಾಸವಿದ್ದ ಅತಿಥಿಗಳು ಶವಗಳನ್ನು ನೋಡಿ ಗಾಬರಿಯಿಂದ ಪೊಲೀಸರಿಗೆ ಸುದ್ದಿ ತಲುಪಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ದುರಂತವು ಮೃತದ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು, ಹಾಗೂ ಈ ಕುಟುಂಬದ ಬಗ್ಗೆ ತಿಳಿದಿರುವವರ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಸಾಧ್ಯವಾದಷ್ಟೂ ಮಟ್ಟಿಗೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವವರೆಗೂ ತನಿಖೆ ಮುಂದುವರಿಸುತ್ತೇವೆ ಎಂದು ಪೊಲೀಸ್ ಇಲಾಖೆಯ ಸಾರ್ಜೆಂಟ್ ಡಾನ್ ವಾಡ್ ಹೇಳಿಕೆ ನೀಡಿದ್ದಾರೆ.