ದುಬೈ,ಜೂ.16(Daijiworld News/AZM):ಜುಮೈರಾ ಕಡಲಲ್ಲಿ ಮುಳುಗಿ ಬೆಂಗಳೂರು ಮೂಲದ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಇಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಜಾನ್ ಪ್ರೀತಮ್ ಪೌಲ್ ಮೃತ ವ್ಯಕ್ತಿ. ತಮ್ಮ ಮೈಗೆ ಅಂಟಿದ್ದ ಮರಳನ್ನು ತೊಳೆಯುವ ಸಲುವಾಗಿ ನೀರಿನಲ್ಲಿ ಮುಳುಗಿದಾಗ ಹೃದಯ ಸ್ಥಂಭನ ಆಗಿರಬಹುದು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಈ ದುರ್ಘಟನೆ ಸಂಭವಿಸಿದ ವೇಳೆ ಮೂವರು ಮಕ್ಕಳು, ಸಂಬಂಧಿಕರು ಜತೆಯಲ್ಲೇ ಇದ್ದರು.
ನಾವು ಹಿಂತಿರುಗುವ ಸ್ವಲ್ಪ ಸಮಯಕ್ಕೆ ಮುಂಚೆ ಸಮುದ್ರದಲ್ಲಿ ಮುಳುಗಿ ಬರುವುದಾಗಿ ತೆರಳಿದರು. ಕೆಲ ನಿಮಿಷದಲ್ಲಿ ದೇಹವು ನೀರಿನಲ್ಲಿ ತೇಲುತ್ತಿರುವುದನ್ನು ಕುಟುಂಬದವರು ಗಮನಿಸಿದರು" ಎಂದು ಪೌಲ್ ರ ಪತ್ನಿ ಎವೆಲೈನ್ ತಿಳಿಸಿದ್ದಾರೆ. ಅವರು ಬಹಳ ಒಳ್ಳೆ ಈಜುಗಾರ. ಅದೇನಾಯಿತು ಎಂಬುದು ನನಗೆ ಈಗಲೂ ತಿಳಿಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಯುಎಇ ಮೂಲದ ರೇಡಿಯೊ ಸ್ಟೇಷನ್ ಗಿಲ್ಲಿ ಎಫ್ ಎಂನಲ್ಲಿ ಜಾನ್ ಪ್ರೀತಂ ಪೌಲ್ ಮಾರಾಟ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಹದಿನಾಲ್ಕು ವರ್ಷಕ್ಕೂ ಹೆಚ್ಚು ಕಾಲ ದುಬೈಯಲ್ಲಿ ಇದ್ದವರು.