ವಾಷಿಂಗ್ಟನ್, ಮಾ.27 (DaijiworldNews/AA): ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ವಿದೇಶಿ ಕಾರು ಹಾಗೂ ಇತರೇ ವಾಹನಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಲ್ಲದೇ ಈ ಸುಂಕ ನಿರ್ಧಾರ ಶಾಶ್ವತವಾಗಿರಲಿದೆ ಎಂದು ತಿಳಿಸಿದ್ದಾರೆ.

ಓವಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಕಾರು, ವಾಹನಗಳ ಮೇಲೆ 25% ಸುಂಕ ವಿಧಿಸಲಾಗುತ್ತದೆ. ಅಮೆರಿಕದಲ್ಲೇ ತಯಾರು ಮಾಡಿದ್ರೆ ಅದಕ್ಕೆ ಯಾವುದೇ ಸುಂಕ ವಿಧಿಸುವುದಿಲ್ಲ ಸ್ಪಷ್ಟನೆ ನೀಡಿದ್ದಾರೆ.
ಏಪ್ರಿಲ್ 2ರಿಂದ ಸುಂಕ ನೀತಿ ಜಾರಿಯಾಗಲಿದ್ದು, ಏಪ್ರಿಲ್ 3ರಿಂದ ಸಂಗ್ರಹ ಪ್ರಾರಂಭವಾಗಲಿದೆ. ಅಮೆರಿಕದ ಈ ನೀತಿಯು ದೇಶಿಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಜೊತೆಗೆ ವಾಹನ ತಯಾರಕರ ಪೂರೈಕೆ ಸರಪಳಿ ಅಭಿವೃದ್ಧಿಗೂ ಪೂರಕವಾಗಲಿದೆ ಎಂದಿದ್ದಾರೆ.
ಆದರೆ ಟ್ರಂಪ್ ಅವರ ಈ ನಿರ್ಧಾರದಿಂದ ಅಮೆರಿಕದ ಗ್ರಾಹಕರು ಹಣದುಬ್ಬರ ಎದುರಿಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.