ದುಬೈ, ಫೆ.27(DaijiworldNews/TA) : ಸುಡಾನ್ನ ಅವಳಿ ನಗರ ಓಮ್ದುರ್ಮನ್ನಲ್ಲಿರುವ ಮಿಲಿಟರಿ ವಿಮಾನ ನಿಲ್ದಾಣದ ಬಳಿ ಸೇನಾ ವಿಮಾನವೊಂದು ಪತನಗೊಂಡು 46 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹಿರಿಯ ಕಮಾಂಡರ್ ಕೂಡಾ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಓಮ್ದುರ್ಮನ್ನ ವಾಡಿ ಸಯೀದ್ನಾ ಮಿಲಿಟರಿ ವಿಮಾನ ನಿಲ್ದಾಣದ ಬಳಿ ಮಂಗಳವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ತಾಂತ್ರಿಕ ಕಾರಣಗಳಿಂದ ವಿಮಾನ ಅಪಘಾತ ಸಂಭವಿಸಿರುವ ಸಾಧ್ಯತೆ ಹೆಚ್ಚಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 10 ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ಕಚೇರಿ ತಿಳಿಸಿದೆ.
ನಿಧನರಾದವರಲ್ಲಿ ಖಾರ್ಟೌಮ್ನಲ್ಲಿ ಹಿರಿಯ ಕಮಾಂಡರ್ ಆಗಿದ್ದ ಮೇಜರ್ ಜನರಲ್ ಬಹರ್ ಅಹ್ಮದ್ ಕೂಡ ಸೇರಿದ್ದಾರೆ, ಅವರು ರಾಜಧಾನಿಯಲ್ಲಿ ಸೈನ್ಯದ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು ಎಂದು ಮಿಲಿಟರಿ ಮೂಲಗಳು ತಿಳಿಸಿವೆ.