ವಾಷಿಂಗ್ಟನ್ ,ಫೆ.20 (DaijiworldNews/AK): ದಕ್ಷಿಣ ಅರಿಜೋನಾದ ಮರಾನಾ ಪ್ರಾದೇಶಿಕ ವಿಮಾನ ನಿಲ್ದಾಣದ ಬಳಿ ಎರಡು ಸಣ್ಣ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸೆಸ್ನಾ ಮತ್ತು ಲಂಕೈರ್ ವಿಮಾನಗಳ ನಡುವೆ ಮರಾನಾ ಪ್ರಾದೇಶಿಕ ವಿಮಾನ ನಿಲ್ದಾಣದ ಬಳಿ ಇಂದು ಬೆಳಿಗ್ಗೆ 8:30ರ ಸುಮಾರಿಗೆ ಡಿಕ್ಕಿ ಸಂಭವಿಸಿದೆ. ಎರಡು ವಿಮಾನದಲ್ಲಿ ತಲಾ ಇಬ್ಬರು ಪ್ರಯಾಣಿಸುತ್ತಿದ್ದರು ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತಿಳಿಸಿದೆ.
ಅಪಘಾತದಲ್ಲಿ ಲಂಕೈರ್ ವಿಮಾನಕ್ಕೆ ಬೆಂಕಿಹೊತ್ತಿಕೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ. ಸೆಸ್ನಾ ವಿಮಾನವು ಅಡ್ಡಾದಿಡ್ಡಿಯಾಗಿ ಬಿದ್ದಿದೆ. ಅದರಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.