ಫ್ರಾಂಕ್ಫರ್ಟ್, ಫೆ.16 (DaijiworldNews/AA): ಜರ್ಮನಿ ಅಧ್ಯಕ್ಷ ಫ್ರಾಂಕ್-ವಾಲ್ವರ್ ಸ್ಟೈನ್ಮಿಯರ್ ಅವರ 'ಎಕ್ಸ್' (ಟ್ವಿಟರ್) ಖಾತೆಯನ್ನು ಅಪರಿಚಿತರು ಹ್ಯಾಕ್ ಮಾಡಿದ್ದು, ಹಲವು ಅವಾಂತರ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.

ಫ್ರಾಂಕ್-ವಾಲ್ವರ್ ಸ್ಟೈನ್ಮಿಯರ್ ಅವರ ಖಾತೆ ಹ್ಯಾಕ್ ಆಗಿದ್ದು, ಆ ಖಾತೆಯನ್ನು ಹಿಂದಿನ ನಾಜಿ ಪಕ್ಷದ ಮುಖ್ಯಸ್ಥ, ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರ ಅಧಿಕೃತ ಖಾತೆ ಎಂಬಂತೆ ಬದಲಾಯಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಸಮಸ್ಯೆ ಬಗೆಹರಿದ ಸ್ವಲ್ಪ ಸಮಯದ ಬಳಿಕ ಫ್ರಾಂಕ್-ವಾಲ್ಟರ್ ಸ್ಟೈನ್ಮಿಯರ್ 'ಎಕ್ಸ್' ಖಾತೆಯ ವಿವರಗಳನ್ನು ಬಿಹಾರ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಖಾತೆ ಎಂಬಂತೆ ಪುನಃ ಬದಲಾಯಿಸಲಾಗಿದೆ. ನಂತರ 'ಎಕ್ಸ್' ಬಳಕೆದಾರರು ಸ್ಟ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದು, ಗೊಂದಲಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.
ಇನ್ನು ಫ್ರಾಂಕ್-ವಾಲ್ಟರ್ ಸ್ಟೈನ್ಮಿಯರ್ ಅವರ 'ಎಕ್ಸ್' ಖಾತೆ ಹ್ಯಾಕ್ ಆಗಿರುವ ಬಗ್ಗೆ ಜರ್ಮನಿ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.