ಗಾಜಾಪಟ್ಟಿ, ಫೆ.15 (DaijiworldNews/AA): ಹಮಾಸ್ ಬಂಡುಕೋರರ ಗುಂಪು ಮತ್ತೆ ಇಂದು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.

ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಈವರೆಗೆ 369 ಪ್ಯಾಲೆಸ್ಟೀನ್ ಕೈದಿಗಳನ್ನು ಇಸ್ರೇಲ್ ಈಗಾಗಲೇ ಬಿಡುಗಡೆ ಮಾಡಿದೆ.
ಹಮಾಸ್ ಉಗ್ರರು ವ್ಯಾನ್ವೊಂದರಲ್ಲಿ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಕರೆತಂದರು. ಬಳಿಕ ಡೇರ್ ಅಲ್ ಬಾಲಾ ನಗರದಲ್ಲಿ ಸಿದ್ದಪದಿಸಿದ್ದ ವೇದಿಕೆಯಲ್ಲಿ ರೆಡ್ ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಇನ್ನು ಈವರೆಗೆ 21 ಇಸ್ರೇಲಿ ಒತ್ತೆಯಾಳುಗಳನ್ನು ಮತ್ತು 369ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ಕೈದಿಗಳನ್ನು ಬಿಡುಗಡೆಗೊಂಡಿದ್ದಾರೆ.