ಬೀಜಿಂಗ್,ಜ.04 (DaijiworldNews/AK): ಕೋವಿಡ್ ಬಂದಿರುವ ಚೀನಾದಲ್ಲಿ ಮತ್ತೆ ಹೆಚ್ಎಂಪಿವಿ ಹೆಸರಿನ ಹೊಸ ವೈರಸ್ ಬಂದಿದೆ. ಇನ್ನು ಈ ಬಗ್ಗೆ ಶ್ವಾಸಕೋಶ ಸಂಬಂಧಿ ರೋಗಗಳಿಂದ ತಮ್ಮ ದೇಶದ ಸಾವಿರಾರು ಮಂದಿ ಆಸ್ಪತ್ರೆ ಸೇರುತ್ತಿರುವುದು ನಿಜ ಎಂಬುದನ್ನು ಚೀನಾ ಒಪ್ಪಿಕೊಂಡಿದೆ. ಹೆಚ್ಎಂಪಿವಿ ವೈರಸ್ ಸೋಕಿದ ಸಾವಿರಾರು ಮಂದಿ ಆಸ್ಪತ್ರೆ ಸೇರುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿವೆ.

ಹೆಚ್ಎಂಪಿವಿ ಅಂದರೆ ಹ್ಯೂಮನ್ ಮೆಟಾನ್ಯೂಮೋ ವೈರಸ್. ಇದು ಪಕ್ಷಿ, ಜಲಚರಗಳಲ್ಲಿ ಶ್ವಾಸಕೋಶ ವ್ಯಾಧಿಗಳನ್ನು ಉಂಟು ಮಾಡುವ ವೈರಸ್ ಆಗಿದೆ. ಹೆಚ್ಎಂಪಿವಿ ವೈರಸ್ ಚೀನಾಗೆ ಹೊಸದೇನು ಅಲ್ಲ. 2021ರಲ್ಲಿ ಮೊದಲ ಬಾರಿ ಮಕ್ಕಳಲ್ಲಿ ಈ ವೈರಸ್ ಅನ್ನು ಡಚ್ ಸಂಶೋಧಕರು ಪತ್ತೆ ಹಚ್ಚಿದ್ದರು. ಆದರೆ ಇದು ಹೇಗೆ ಸೋಕುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ವಿಫಲರಾಗಿದ್ದರು.
ಹೆಚ್ಎಂಪಿವಿ ವೈರಸ್ ನಿಯಂತ್ರಣಕ್ಕೆ ವ್ಯಾಕ್ಸಿನ್, ಔಷಧಿ ಕಂಡು ಹಿಡಿದಿಲ್ಲ. ಶೀತ-ಕೆಮ್ಮು, ಜ್ವರ, ಸೀನುವಿಕೆ, ಮೂಗು ಸೋರುವಿಕೆ ಇದರ ಪ್ರಮುಖ ಲಕ್ಷಣ. ಇದು ನ್ಯೂಮೋನಿಯಾ, ಬ್ರಾಂಕೈಟಿಸ್ಗೆ ದಾರಿ ಮಾಡಿಕೊಡಬಹುದು. ಸದ್ಯಕ್ಕೆ ಚೀನಾದ ಉತ್ತರ ಭಾಗದಲ್ಲಿ ಮಾತ್ರ ಕಂಡು ಬಂದಿದ್ದು ವಯಸ್ಸಿನ ಬೇಧವಿಲ್ಲದೇ ಎಲ್ಲರಿಗೂ ಈ ವೈರಸ್ ಸೋಕುತ್ತಿದೆ. ಮುಖ್ಯವಾಗಿ ಮಕ್ಕಳು, ವಯೋವೃದ್ಧರನ್ನು ಹೆಚ್ಚು ಕಾಡುತ್ತಿದೆ.
ಹೊಸ ವೈರಸ್ ಮಾರಣಾಂತಿಕವೇ ಎಂಬುದು ಇನ್ನೂ ಖಚಿತವಾಗಿಲ್ಲ. ಈಗಾಗಲೇ ಮಾಸ್ಕ್ ಧರಿಸಿ ಎಂಬ ಮಾರ್ಗಸೂಚಿ ಬಿಡುಗಡೆಯಾಗಿದ್ದು ಸ್ವಚ್ಛತೆ, ಭೌತಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.