ಇಸ್ಲಾಮಾಬಾದ್, ಡಿ.08(DaijiworldNews/AA): ಪಾಕಿಸ್ತಾನದಲ್ಲಿ ಹಿಂದೂ ವ್ಯಕ್ತಿಯೊಬ್ಬರು ಮೊಟ್ಟ ಮೊದಲ ಪೊಲೀಸ್ ಅಧಿಕಾರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ರಾಜೇಂದರ್ ಮೇಘವಾರ್ ಅವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಾಡಿನ್ ಗ್ರಾಮಾಂತರ ಮತ್ತು ಹಿಂದುಳಿದ ಜಿಲ್ಲೆಯವರು. ಅವರು ಪಾಕ್ನ ಮೊದಲ ಹಿಂದೂ ಪೊಲೀಸ್ ಅಧಿಕಾರಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಪಾಕಿಸ್ತಾನದ ಪ್ರತಿಷ್ಠಿತ ಸೆಂಟ್ರಲ್ ಸುಪೀರಿಯರ್ ಸರ್ವೀಸಸ್ ಪರೀಕ್ಷೆಯಲ್ಲಿ ರಾಜೇಂದರ್ ಮೇಘವರ್ ಅವರು ಉತ್ತೀರ್ಣರಾಗುತ್ತಾರೆ. ಪ್ರಸ್ತುತ ರಾಜೇಂದರ್ ಮೇಘವರ್ ಅವರು ಪಾಕಿಸ್ತಾನದ ಪೊಲೀಸ್ ಸೇವೆ (ಪಿಎಸ್ಪಿ) ಅಡಿಯಲ್ಲಿ ಫೈಸಲಾಬಾದ್ನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್ಪಿ) ನೇಮಕರಾಗಿದ್ದಾರೆ.