ಪ್ಯಾರಿಸ್ , ಡಿ.06 (DaijiworldNews/AK):ಫ್ರಾನ್ಸ್ನ ನೂತನ ಪ್ರಧಾನ ಮಂತ್ರಿಯನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ.

ಅದೇ ಹೊತ್ತಿಗೆ 2027ರವರೆಗೆ ತಮ್ಮ ಅಧಿಕಾರವಧಿ ಪೂರ್ಣ ಗೊಳಿಸುವುದಾಗಿ ಮ್ಯಾಕ್ರನ್ ತಿಳಿಸಿದ್ದಾರೆ.ಫ್ರಾನ್ಸ್ ಪ್ರಧಾನಿ ಮಿಷೆಲ್ ಬರ್ನಿ ಯರ್ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದೆ. ಇದರಿಂದ ಅವರು ಅಧಿಕಾರದಿಂದ ಪದಚ್ಯುತಗೊಂಡಿದ್ದಾರೆ.
1962ರ ಬಳಿಕ ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣ ಯಕ್ಕೆ ಯಶಸ್ಸು ದೊರೆತಿದೆ.ಹೊಸ ಸರ್ಕಾ ರ ರಚನೆ ಆಗುವವರೆಗೂ ಉಸ್ತುವಾರಿ ಪ್ರಧಾನಿಯಾಗಿ ಮಿಷೆಲ್ ಬರ್ನಿ ಯರ್ ಮುಂ ದುವರಿಯಬೇ ಕು ಎಂ ದು ಅಧ್ಯಕ್ಷ ಎಮಾನ್ಯುಯೆಲ್ಮ್ಯಾಕ್ರನ್ ಅವರು ಸೂಚಿಸಿದ್ದಾರೆ.