ಜಾರ್ಜ್ಟೌನ್, ನ.21(DaijiworldNews/TA):ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಯಾನಾ ಸರ್ಕಾರ ಅತ್ಯುನ್ನತ ಗೌರವವಾದ `ದಿ ಆರ್ಡರ್ ಆಫ್ ಎಕ್ಸಲೆನ್ಸ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಮೂರು ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿರುವ ಮೋದಿ ಬುಧವಾರ ಗಯಾನಾಕ್ಕೆ ಭೇಟಿ ನೀಡಿದ್ದಾರೆ.ಅವರಿಗೆ ಅಲ್ಲಿ ಭವ್ಯ ಸ್ವಾಗತಕೋರಲಾಯಿತು. 56 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದೆ ಎಂದು ಹೇಳಲಾಗಿದೆ.
ಜಾರ್ಜ್ಟೌನ್ನ ಸ್ಟೇಟ್ ಹೌಸ್ನಲ್ಲಿ ನಡೆದ ಭಾರತ-ಕೆರಕಮ್ ಶೃಂಗಸಭೆಯಲ್ಲಿ ಗಯಾನಾದ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಪ್ರಧಾನಿ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದವರ ಪೈಕಿ ಪ್ರಧಾನಿ ಮೋದಿ ನಾಲ್ಕನೇ ವಿದೇಶಿ ನಾಯಕರಾಗಿದ್ದಾರೆ ಎಂದು ಹೇಳಲಾಗಿದೆ.