ಕ್ಯಾನ್ ಬೆರಾ, ಅ.28(DaijiworldNews/AA): ಆಸ್ಟ್ರೇಲಿಯಾ ಅಕ್ಟೋಬರ್ ತಿಂಗಳನ್ನು "ಹಿಂದೂ ಪರಂಪರೆ ಮಾಸ" ಎಂದು ಅ.27ರಂದು ಘೋಷಣೆ ಮಾಡಿದೆ.
ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ "ಅಕ್ಟೋಬರ್ ತಿಂಗಳನ್ನು ಹಿಂದೂ ಪರಂಪರೆ ಮಾಸ" ಎಂದು ಭಾನುವಾರ ಘೋಷಿಸಿದ್ದಾರೆ. ಹಿಂದೂ ಪರಂಪರೆ ಮಾಸ ಎಂದು ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ ಘೋಷಿಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಜಗತ್ತಿನ ಹಲವು ದೇಶಗಲ್ಲಿ ದೀಪಾವಳಿ ಹಬ್ಬವನ್ನು ಜನರು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಹಿಂದೂಗಳು ಪ್ರತಿವರ್ಷ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಇದೀಗ ಆಸ್ಟ್ರೇಲಿಯಾ ಅಕ್ಟೋಬರ್ ತಿಂಗಳನ್ನು “ಹಿಂದೂ ಪರಂಪರೆ ಮಾಸ” ಎಂದು ಘೋಷಿಸಿದೆ.