ರಬತ್,ಅ.12(DaijiworldNews/TA):ಸಹರಾ ಮರಭೂಮಿಯಲ್ಲಿ ಭಾರೀ ಮಳೆಯಾಗುತ್ತಿದ್ದು 50 ವರ್ಷದ ನಂತರ ಕೆರೆಗಳು ಭರ್ತಿಯಾಗುತ್ತಿವೆ. ಆಗ್ನೇಯ ಮೊರಾಕ್ಕೊದಲ್ಲಿ ಎರಡು ದಿನಗಳ ಧಾರಾಕಾರ ಮಳೆಯ ನಂತರ ಸಹರಾ ಮರುಭೂಮಿಯ ಕೆಲವು ಭಾಗಗಳಲ್ಲಿ ತೀವ್ರ ಪ್ರವಾಹ ಸೃಷ್ಟಿಯಾಗಿದೆ.
ಮೊರಕ್ಕೊ ರಾಜಧಾನಿ ರಬತ್ನ ದಕ್ಷಿಣಕ್ಕೆ 450 ಕಿಮೀ ದೂರದಲ್ಲಿರುವ ಟಗೌನೈಟ್ ಗ್ರಾಮದಲ್ಲಿ ಸೆಪ್ಟೆಂಬರ್ನಲ್ಲಿ ಕೇವಲ 24 ಗಂಟೆಗಳಲ್ಲಿ 100 ಮಿ.ಮೀ ಮಳೆಯಾಗಿತ್ತು ಎಂದು ಮೊರಾಕ್ಕೊದ ಹವಾಮಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವದ ಅತಿದೊಡ್ಡ ಬಿಸಿ ಮರುಭೂಮಿ, ಉತ್ತರ ಆಫ್ರಿಕಾದ ಪ್ರದೇಶದಲ್ಲಿ ನೆಲೆಗೊಂಡಿದೆ, ಇದು ಪ್ರಪಂಚದ ಅತ್ಯಂತ ಶುಷ್ಕ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಬೇಸಿಗೆಯ ಕೊನೆಯಲ್ಲಿ ಅಪರೂಪವಾಗಿ ಮಳೆ ಬೀಳುವ ಪ್ರದೇಶವಾಗಿದೆ. ಮೊರೊಕನ್ ಸರ್ಕಾರವು, ಸೆಪ್ಟೆಂಬರ್ನಲ್ಲಿನ ಎರಡು ದಿನಗಳ ಮಳೆಯು ವಾರ್ಷಿಕ ಸರಾಸರಿಯನ್ನು ಮೀರಿದೆ ಎಂದು ಹೇಳಿದೆ.