ವಾಷಿಂಗ್ಟನ್,ಜೂ01(DaijiworldNews/AZM): ಅಮೆರಿಕದ ವರ್ಜೀನಿಯಾ ಬೀಚ್ನಲ್ಲಿ ನಡೆದ ಶೂಟೌಟ್ಗೆ12 ಜನ ಸ್ಥಳದಲ್ಲೇ ಮೃತಪಟ್ಟು 6 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ವರ್ಜೀನಿಯಾ ಬೀಚ್ನಲ್ಲಿರುವ ಸರ್ಕಾರಿ ಕಟ್ಟಡಕ್ಕೆ ಶುಕ್ರವಾರ ಸಂಜೆ ಆಗಮಿಸಿದ ದುಷ್ಕರ್ಮಿ ಏಕಾಏಕಿ ಸಾರ್ವಜನಿಕರ ಮೇಲೆ ಗುಂಡಿನ ಸುರಿಮಳೆ ಗೈದಿದ್ದಾನೆ. ಈ ದಾಳಿಯಲ್ಲಿ ಸ್ಥಳದಲ್ಲೇ 12 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ದಾಳಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.ಆದರೆ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆ ಕುರಿತಂತೆ ಅಮೆರಿಕದ ತನಿಖಾ ಸಂಸ್ಥೆಗಳು ವಿಚಾರಣೆ ತೀವ್ರಗೊಳಿಸಿದೆ. ಭಯೋತ್ಪಾದನೆ ಸೇರಿ ಎಲ್ಲಾ ಆಯಾಮಗಳನ್ನು ತನಿಖಾ ಸಂಸ್ಥೆಗಳು ನೋಡುತ್ತಿವೆ. ಅಮೆರಿಕದಲ್ಲಿ ಕಳೆದೊಂದು ವರ್ಷದಲ್ಲಿ 150ಕ್ಕೂ ಅಧಿಕ ಶೂಟ್ಔಟ್ಗಳು ನಡೆದಿದೆ. ಇದು ಅಮೆರಿಕ ಸರ್ಕಾರ ಹಾಗೂ ಸ್ಥಳೀಯರ ಚಿಂತೆಗೆ ಕಾರಣವಾಗಿದೆ.
ಸಾರ್ವಜನಿಕರು ಸರ್ಕಾರದ ನೀತಿಯನ್ನು ಟೀಕಿಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಭರವಸೆಯ ಹೊರತಾಗಿ ಶಸ್ತ್ರಾಸ್ತ್ರ ಖರೀದಿ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಸಾರ್ವಜನಿಕರಿಗೆ ಬೇಕಾಬಿಟ್ಟಿಯಾಗಿ ಶಸ್ತ್ರಾಸ್ತ್ರಗಳು ಸಿಗುತ್ತಿವೆ ಇದು ಇಂತಹ ಅಪರಾಧಗಳು ಹೆಚ್ಚಳವಾಗಲು ಕಾರಣವಾಗಿವೆ ಎನ್ನಲಾಗುತ್ತಿದೆ.