ಕೋಲ್ಕತ್ತಾ, ಆ.15(DaijiworldNews/AK): ನಮ್ಮ ಮೇಲೆ ಅತ್ಯಾಚಾರ ಮಾಡೋದನ್ನ ನಿಲ್ಲಿಸಿ ಎಂದು ನಟಿ ಪೂನಂ ಪಾಂಡೆ ಭಾವುಕ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ.
ಕೋಲ್ಕತ್ತಾದಲ್ಲಿ ತರಬೇತಿ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ.
ಅತ್ಯಾಚಾರಿಗಳು ಮುಕ್ತವಾಗಿ ನಡೆಯುವ, ಹಿಂಬಾಲಕರು ಕತ್ತಲಲ್ಲಿ ಅಡಗಿರುವ ಹಾಗೂ ಮಹಿಳೆಯರು ನಿರಂತರವಾಗಿ ಅಸುರಕ್ಷಿತರಾಗಿರುವ ಈ ಜಗತ್ತಿನಲ್ಲಿ ನಾವು ಏಕೆ ವಾಸಿಸುತ್ತಿದ್ದೇವೆ?
ನಾವು ಹೇಗೆ ಬಟ್ಟೆ ಧರಿಸುತ್ತೇವೆ? ಹೇಗೆ ನಡೆಯುತ್ತೇವೆ? ಹೇಗೆ ಮಾತನಾಡುತ್ತೇವೆ ಎಂಬುದನ್ನು ಕೇಳುತ್ತಾರೆ? ಏನು ಮಾಡಬೇಕು ಎಂಬುದನ್ನು ಹೇಳುತ್ತಾರೆ? ಆದ್ರೆ ನಾವು ಭಯವಿಲ್ಲದೇ ಬದುಕುವುದಕ್ಕೆ ಏಕೆ ಸಾಧ್ಯವಿಲ್ಲ? ನಾವು ಸುರಕ್ಷತೆ, ಘನತೆ ಮತ್ತು ಗೌರವ ಬಯಸಿದಾಗ ನಮ್ಮ ಧ್ವನಿಯನ್ನು ಏಕೆ ಮೌನಗೊಳಿಸುತ್ತಾರೆ?
ನಾವು ಬೇಡುವುದು ಒಂದೇ. ದಯವಿಟ್ಟು ಇನ್ನಾದರೂ ನಮ್ಮ ಮೇಲೆ ಅತ್ಯಾಚಾರ ಮಾಡುವುದನ್ನು ನಿಲ್ಲಿಸಬಹುದೇ? ನಮ್ಮನ್ನು ಹಿಂಬಾಲಿಸುವುದನ್ನ ನಿಲ್ಲಿಸಬಹುದೇ?
ದಯವಿಟ್ಟು ನಮಗೆ ಕಿರುಕುಳ ನೀಡೋದನ್ನ ನಿಲ್ಲಿಸಬಹುದೇ?ನಾವು ಸಹ ಎಲ್ಲರಂತೆ ಯಾವುದೇ ಬೆದರಿಕೆಯಿಲ್ಲದೇ ಸರಳವಾಗಿ ಬದುಕಲು ಅರ್ಹರಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.