ಬೆಂಗಳೂರು, ಆ.14(DaijiworldNews/AA): ಸ್ಯಾಂಡಲ್ ವುಡ್ ನಟ ಯಶ್ ನಟಿಸುತ್ತಿರುವ 'ಟಾಕ್ಸಿಕ್' ಸಿನಿಮಾದಲ್ಲಿ ಬಾಲಿವುಡ್ ನಟನೊಬ್ಬ ನಟಿಸಲಿದ್ದು, ಈಗಾಗಲೇ ಬೆಂಗಳೂರು ತಲುಪಿದ್ದಾರೆ.
ಈಗಾಗಲೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದ್ದು, ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸಿನಿಮಾದಲ್ಲಿ ಕೆಲವು ಸ್ಟಾರ್ ನಟ-ನಟಿಯರ ನಟಿಸಲಿದ್ದು, ಇದೀಗ ಬಾಲಿವುಡ್ ನ ಅಕ್ಷಯ್ ಒಬೆರಾಯ್ ಅವರು ಅವರು ನಟಿಸುತ್ತಿದ್ದಾರೆ.
ಈ ಕುರಿತು ಅಕ್ಷಯ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಸ್ವತಃ ವಿಷಯ ಹಂಚಿಕೊಂಡಿದ್ದರು. ತಮ್ಮ ಪೋಸ್ಟ್ ನಲ್ಲಿ 'ಟಾಕ್ಸಿಕ್' ಸಿನಿಮಾ ತಂಡವು ತಮ್ಮನ್ನು ಚಿತ್ರತಂಡಕ್ಕೆ ಸ್ವಾಗತಿಸಿರುವ ಚಿತ್ರವೊಂದನ್ನು ಅಕ್ಷಯ್ ಹಂಚಿಕೊಂಡಿದ್ದಾರೆ. ಇನ್ನು 'ಟಾಕ್ಸಿಕ್' ಸಿನಿಮಾನಲ್ಲಿ ಯಶ್ ಜೊತೆಗೆ ಅಕ್ಷಯ್ ಒಬೆರಾಯ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಅಕ್ಷಯ್ ಅತ್ಯುತ್ತಮ ನಟನಾಗಿದ್ದು, 'ಪೀಕು', 'ಕಾಲಖಂಡಿ', 'ಪಿತೂರ್', 'ಲವ್ ಹಾಸ್ಟೆಲ್', 'ಗುಸ್ಫೇಟಿಯಾ', 'ಥಾರ್' ಇನ್ನೂ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುತ್ತಾರೆ. ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ಹೃತಿಕ್, ದೀಪಿಕಾ ಪಡುಕೋಣೆಯ 'ಫೈಟರ್' ಸಿನಿಮಾದಲ್ಲಿಯೂ ಅವರು ನಟಿಸಿರುತ್ತಾರೆ. ಜೊತೆಗೆ ಅಕ್ಷಯ್ ಹಲವು ಜನಪ್ರಿಯ ವೆಬ್ ಸರಣಿ ಹಾಗೂ ಕಿರು ಚಿತ್ರಗಳಲ್ಲಿಯೂ ಅಭಿನಯಿಸಿರುತ್ತಾರೆ.