ಚೆನ್ನೈ, ಆ 12 (DaijiworldNews/TA): ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯ ಸಮಂತಾ ಸದ್ಯ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯವಾಡಿ ವರುಷಗಳೇ ಕಳೆದಿದೆ.
ಇತ್ತೀಚೆಗೆ ನಾಗಚೈತನ್ಯ ತಮ್ಮ ನಿಶ್ಚಿತಾರ್ಥದ ವಿಚಾರವಾಗಿ ಅಭಿಮಾನಿಗಳಿಗೆ ಸಂತಸದ ವಿಚಾರ ನೀಡಿದ್ದು ಇದೀಗ ಸಮಂತಾ ಕೂಡಾ ತಮ್ಮ ಬಾಳಿನಲ್ಲಿ ಹೊಸ ಅಧ್ಯಾಯ ಬರೆಯೋದಕ್ಕೆ ಶುರುಮಾಡಿದಂತಿದೆ.
ಹೌದು ಇದೀಗ ಸಮಂತಾ ಮತ್ತೆ ಮದುವೆ ಆಗಲಿದ್ದಾರೆ ಎಂಬಂತಹ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಸಮಂತಾ ಮಾಡಿದಂತಹ ಆ ಒಂದು ಪೋಸ್ಟ್. ಸಾಮಾಜಿಕ ಜಾಲತಾಣದದಲ್ಲಿ ಸಮಂತಾ ಅಭಿಮಾನಿ ಮುಕೇಶ್ ಚಿಂತಾ ಅವರು ವಿಡಿಯೋ ಮಾಡಿ ಸಮಂತಾಗೆ ಮದುವೆ ಪ್ರಸ್ತಾಪ ಮಾಡಿದ್ದಾರೆ. ವಿಡಿಯೋದಲ್ಲಿ ಅಭಿಮಾನಿ ಸಮಂತಾಗೆ ಪ್ರಪೋಸ್ ಮಾಡಿ ತನ್ನನ್ನು ಮದುವೆಯಾಗುವಂತೆ ಕೇಳಿದ್ದಾರೆ. ಇದಕ್ಕೆ ಸಮಂತಾ ಕೂಡ ಉತ್ತರ ನೀಡಿದ್ದಾರೆ.ಈ ಉತ್ತರದಿಂದಲೇ ಇದೀಗ ಸಮಂತಾ ಮದುವೆ ವಿಚಾರ ಪ್ರಸ್ತಾಪವಾದಂತಿದೆ.
ವಿಡಿಯೋ ನೋಡಿದ ಬಳಿಕ ಸಮಂತಾ, ‘ಹಿನ್ನಲೆಯಲ್ಲಿ ಜಿಮ್ ಕಾಣಿಸುತ್ತಿದೆ. ಅದು ನನ್ನನ್ನು ಸ್ವಲ್ಪ ಕನ್ವಿನ್ಸ್ ಮಾಡಿದೆ’ ಎಂದು ಸಮಂತಾ ಕಮೆಂಟ್ ಮಾಡಿದ್ದಾರೆ. ಸದ್ಯ ಸಮಂತಾ ನೀಡಿದ ಉತ್ತರ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಾಗುತ್ತಿದೆ. ಸಮಂತಾ ಪ್ರತಿಕ್ರಿಯೆ ತಿಳಿದು ಅಭಿಮಾನಿಯೂ ಖುಷಿಯಾಗಿದ್ದಾರೆ. ಸದ್ಯದಲ್ಲೇ ಸಮಂತಾ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡ್ತಾರಾ ಕಾದು ನೋಡಬೇಕಿದೆ.