ಬೆಂಗಳೂರು, ಆ.11(DaijiworldNews/AA): ಸ್ಯಾಂಡಲ್ವುಡ್ನ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮೊಂಥೆರೋ ಅವರು ಇಂದು ಸಪ್ತಪದಿ ತುಳಿದಿದ್ದಾರೆ.
ತರುಣ್ ಹಾಗೂ ಸೋನಾಲ್ ವಿವಾಹಕ್ಕೆ ಚಿತ್ರರಂಗದ ಅನೇಕ ಗಣ್ಯರು ಮತ್ತು ಕುಟುಂಬದಸ್ಥರು ಆಗಮಿಸಿದ್ದು, ಇವರೆಲ್ಲರ ಸಮ್ಮುಖದಲ್ಲಿ ಈ ಜೋಡಿಯು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮದುವೆಗೆ ಅದ್ದೂರಿ ಧಾರೆ ಮಂಟಪ ಸೆಟ್ ಹಾಕಲಾಗಿದೆ.
ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿದ್ದು, ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪದ ಸಿದ್ಧತೆ ಮಾಡಲಾಗಿದೆ. ಮದುವೆಗೆ ನಟ ಶರಣ್, ನೆನಪಿರಲಿ ಪ್ರೇಮ್, ಶ್ರುತಿ, ಮಾಲಾಶ್ರೀ, ಸುಧಾರಾಣಿ, ಅವಿನಾಶ, ನಿಶ್ವಿಕಾ ನಾಯ್ಡು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ದು, ನವ ಜೋಡಿಗೆ ಶುಭ ಹಾರೈಸಿದರು.