ಬೆಂಗಳೂರು, ಆ.10(DaijiworldNews/AA): ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ಅವರ ಆರತಕ್ಷತೆಯು ಅದ್ಧೂರಿಯಾಗಿ ನಡೆಯುತ್ತಿದೆ.
'ರಾಬರ್ಟ್' ಸಿನಿಮಾದಲ್ಲಿ ಒಂದಾಗಿ ಕೆಲಸ ಮಾಡಿದ್ದ ನಿರ್ದೇಶಕ ತರುಣ್ ಹಾಗೂ ನಟಿ ಸೋನಲ್ ಮೊಂತೆರೋ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಿನ್ನೆಯಿಂದಲೇ ಆಪ್ತರು, ಸ್ನೇಹಿತರು, ಸೆಲೆಬ್ರಿಟಿಗಳ ಸಮ್ಮುಖದಲ್ಲಿ ವಿವಾಹಪೂರ್ವ ಶಾಸ್ತ್ರಗಳು ಪ್ರಾರಂಭವಾಗಿದ್ದವು.
ಇನ್ನು ಇಂದು ನಡೆಯುತ್ತಿರುವ ಆರತಕ್ಷತೆ ಸಮಾರಂಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಪವನ್ ಒಡೆಯರ್, ಅನಿರುದ್ಧ್ ಜತ್ಕರ್, ಸಂತೋಷ್ ಆನಂದ್ರಾಮ್, ರವಿಶಂಕರ್ ಗೌಡ, ಕಾರುಣ್ಯ ರಾಮ್, ಉಮಾಪತಿ ಶ್ರೀನಿವಾಸ್ ಗೌಡ, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದು, ಈ ಜೋಡಿಗೆ ಶುಭ ಕೋರಿದ್ದಾರೆ.