ಬೆಂಗಳೂರು, ಆ.09(DaijiworldNews/AA): ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾಗೆ ಆಗಸ್ಟ್ 8ರಂದು ಸರಳವಾಗಿ ಮುಹೂರ್ತ ಕಾರ್ಯಕ್ರಮ ಜರುಗಿತ್ತು. ಇದರ ಬೆನ್ನಲ್ಲೇ ಇದೀಗ ಈ ಚಿತ್ರಕ್ಕಾಗಿ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆಜೆ ಪರ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ.
'ಟಾಕ್ಸಿಕ್' ಸಿನಿಮಾದಲ್ಲಿ ಆಕ್ಷನ್ ಎಲಿಮೆಂಟ್ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆಜೆ ಪೆರ್ರಿ ಕೊರಿಯೋಗ್ರಾಫಿಯಲ್ಲಿ 'ಟಾಕ್ಸಿಕ್' ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಮೂಡಿ ಬರಲಿದೆ. 'ಟಾಕ್ಸಿಕ್' ಚಿತ್ರದಲ್ಲಿ ರಾಜಿಯಾಗಬಾರದು ಎಂದು ಯಶ್ ಅವರು ಖ್ಯಾತ ಜೆಜೆ ಪರ್ರಿ ಅವರನ್ನು ಬೆಂಗಳೂರಿಗೆ ಕರೆಸಿದ್ದಾರೆ.
ಹಾಲಿವುಡ್ ನಟರುಗಳಿಗೆ ಸ್ಟಂಟ್ ಡಬ್ಬರ್ ಆಗಿ ಜೆಜೆ ಪೆರ್ರಿ ಕೆಲಸ ಮಾಡಿದ್ದಾರೆ. 80ರ ದಶಕದ ಸಿನಿಮಾಗಳಲ್ಲಿ ಜೆಜೆ ಪೆರ್ರಿ ಅವರು ಸ್ಟಂಟ್ ಡಬ್ಬರ್ ಆಗಿ ಕೆಲಸ ಮಾಡಿ ಜೆಜೆ ಪೆರ್ರಿ ಅವರು ಸೈ ಎನಿಸಿಕೊಂಡಿದ್ದಾರೆ. ತಮ್ಮ ಪ್ರತಿಭೆಯಿಂದಾಗಿ ಅವರಿಗೆ ಹಲವು ಭಾಷೆಗಳಲ್ಲಿ ಬೇಡಿಕೆ ಇದೆ.