ಹೈದರಾಬಾದ್ ಆ.08(DaijiworldNews/AK): ಟಾಲಿವುಡ್ ನಟ ನಾಗಚೈತನ್ಯ ಇಂದು (ಆ.8) ಹೈದರಾಬಾದ್ನ ತಮ್ಮ ನಿವಾಸದಲ್ಲಿ ನಟಿ ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಸಿಹಿಸುದ್ದಿಯನ್ನು ನಾಗಾರ್ಜುನ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ನಮ್ಮ ಮಗ ನಾಗಚೈತನ್ಯ ಮತ್ತು ಶೋಭಿತಾ ಅವರೊಂದಿಗೆ ಇಂದು ಬೆಳಗ್ಗೆ 9:42ಕ್ಕೆ ನಡೆದ ನಿಶ್ಚಿತಾರ್ಥವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಶೋಭಿತಾಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಖುಷಿಯಾಗುತ್ತಿದೆ. ಈ ಜೋಡಿಗೆ ಅಭಿನಂದನೆಗಳು. ಅವರಿಗೆ ಜೀವನಪೂರ್ತಿ ಸಂತೋಷ ಮತ್ತು ಪ್ರೀತಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ ಎಂದು ಜೋಡಿಗೆ ನಾಗಾರ್ಜುನ ಶುಭ ಹಾರೈಸಿದ್ದಾರೆ.
ಸಮಂತಾ ಜೊತೆಗಿನ ಡಿವೋರ್ಸ್ ನಂತರ ಶೋಭಿತಾ ಜೊತೆ ನಾಗಚೈತನ್ಯ ಹೆಸರು ಕೇಳಿ ಬಂದಿತ್ತು. ಫೋಟೋಗಳು ವೈರಲ್ ಆಗಿತ್ತು. ಈಗ ನಿಶ್ಚಿತಾರ್ಥ ಸುದ್ದಿ ಮೂಲಕ ಎಲ್ಲ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಸಮಂತಾ ಜೊತೆಗಿನ ಹಲವು ವರ್ಷಗಳ ಪ್ರೀತಿಗೆ ನಾಗಚೈತನ್ಯ 2021ರಲ್ಲಿ ಡಿವೋರ್ಸ್ ಪಡೆಯುವ ಮೂಲಕ ದಾಂಪತ್ಯ ಜೀವನ ಕೊನೆಗೊಳಿಸಿದ್ದರೂ.