ಬೆಂಗಳೂರು, ಆ.06(DaijiworldNews/AA): ನಟ, ನಿರ್ಮಾಪಕ ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ಇದರೊಂದಿಗೆ ಅನೇಕ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆ ಅವರಿಗೆ ತುಮಕೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ ಸುದೀಪ್ ಅವರು ಇದನ್ನು ನಿರಾಕರಿಸಿದ್ದಾರೆ.
ಕಿಚ್ಚ ಸುದೀಪ್ ಅವರಿಗೆ ತುಮಕೂರು ವಿಶ್ವ ವಿದ್ಯಾಲಯವು 17 ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು. ಬಳಿಕ ಈ ವಿಷಯವನ್ನು ಸುದೀಪ್ ಅವರ ಗಮನಕ್ಕೆ ತರಲಾಗಿತ್ತು. ವಿವಿ ನಿರ್ಧಾರಕ್ಕೆ ಸುದೀಪ್ ಅವರು ಧನ್ಯವಾದ ತಿಳಿಸಿರುವ ಅವರು, ಇದನ್ನು ನಯವಾಗಿ ತಿರಸ್ಕರಿಸಿದ್ದಾರೆ.
ಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಹಿರಿಯರು ಇದ್ದಾರೆ. ಅವರಿಗೆ ಡಾಕ್ಟರೇಟ್ ನೀಡಿ ಎಂದು ಕಿಚ್ಚ ಸುದೀಪ್ ವಿವಿಯನ್ನು ಕೋರಿದ್ದಾರೆ.