ತಿರುವನಂತಪುರಂ, ಆ.05(DaijiworldNews/AA): ಈ ವರ್ಷ ಬಿಡುಗಡೆಯಾಗಿ 250 ಕೋಟಿ ಗಳಿಕೆ ಮಾಡಿದ್ದ 'ಮಂಜುಮ್ಮೆಲ್ ಬಾಯ್ಸ್' ಚಿತ್ರತಂಡ ಇಳಯರಾಜ ಅವರಿಗೆ 60 ಲಕ್ಷ ರೂ. ಪರಿಹಾರ ನೀಡಿದೆ.
'ಮಂಜುಮ್ಮೆಲ್ ಬಾಯ್ಸ್' ಸಿನಿಮಾದಲ್ಲಿ ಇಳಯರಾಜ ಸಂಗೀತ ಸಂಯೋಜನೆಯ 'ಕಣ್ಮಣಿ' ಹಾಡನ್ನು ಬಳಸಲಾಗಿತ್ತು. ಈ ಹಾಡು ಅನಧಿಕೃತವಾಗಿ ಬಳಸಲಾಗಿದೆ ಎಂದು ಇಳಯರಾಜ ಅವರು ಕೋರ್ಟ್ನಲ್ಲಿ ಕೇಸ್ ಹಾಕಿದ್ದರು. ಜೊತೆಗೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಪರಿಹಾರ ಕೇಳಿದ್ದಾರೆ. ಆದರೆ ಚಿತ್ರತಂಡವು ಇದೀಗ ಇಳಯರಾಜ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 60 ಲಕ್ಷ ರೂ. ಪಾವತಿಸಿದೆ.
'ಮಂಜುಮ್ಮೇಲ್ ಬಾಯ್ಸ್' ಕಥೆ ಸಾಗೋದು ಗುಣ ಗುಹೆಯಲ್ಲಿ. ಈ ಹಿನ್ನೆಲೆ 'ಗುಣ' ಚಿತ್ರದಲ್ಲಿ ಬಳಕೆ ಆದ 'ಕಣ್ಮಣಿ' ಎಂಬ ಹಾಡನ್ನು ಚಿತ್ರದಲ್ಲಿ ಬಳಕೆ ಮಾಡಿಕೊಳ್ಳಲಾಗಿತ್ತು. ಈ ಹಾಡನ್ನು ಬಳಸಲು ಚಿತ್ರತಂಡವು ಮ್ಯೂಸಿಕ್ ಕಂಪನಿಯಿಂದ ಒಪ್ಪಿಗೆ ಕೂಡ ಪಡೆದಿದ್ದರು. ಆದರೆ, ಇವರು ಇಳಯರಾಜ ಅವರ ಒಪ್ಪಿಗೆ ಪಡೆದಿರಲಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ 'ಕಣ್ಮಣಿ' ಹಾಡು ಎಲ್ಲರ ಗಮನ ಸೆಳೆದಿತ್ತು. ಈ ಬೆನ್ನಲ್ಲೇ ಚಿತ್ರತಂಡಕ್ಕೆ ಇಳಯರಾಜ ನೋಟಿಸ್ ನೀಡಿದ್ದರು.