ಮುಂಬೈ, ಆ.03(DaijiworldNews/AA): ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ 'ಬಿಗ್ ಬಾಸ್' ಖ್ಯಾತಿಯ ಹಿನಾ ಖಾನ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇದೀಗ ಟ್ರಿಮ್ಮರ್ ಹಿಡಿದು ನಟಿ ತಲೆಬೋಳಿಸಿಕೊಂಡಿದ್ದಾರೆ.
ಹೌದು ನಟಿ ಟ್ರಿಮ್ಮರ್ ಹಿಡಿದು ತಲೆ ಬೋಳಿಸಿಕೊಳ್ಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ನಡೆಗೆ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ನಟಿ ಹಿನಾ ಖಾನ್ ಅವರು, ಅನಾರೋಗ್ಯವನ್ನು ಎದುರಿಸಬೇಕು ಎಂದರೆ ಮಾನಸಿಕವಾಗಿ ಗಟ್ಟಿಯಾಗಿ ನಿಲ್ಲಬೇಕು. ಹೀಗೆ ಮಾಡಿದಾಗ ಚಿಕಿತ್ಸೆಗೆ ಇನ್ನೊಂದು ಹೆಜ್ಜೆ ಹತ್ತಿರ ಬರುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ನಟಿಯ ಮಾತುಗಳಿಗೆ ಅಭಿಮಾನಿಗಳು, ನೀವು ಆದಷ್ಟು ಬೇಗ ಗುಣಮುಖರಾಗಬೇಕು ಎಂದು ಹಾರೈಸಿದ್ದಾರೆ.