ಮುಂಬೈ,ಮೇ21(DaijiworldNews/AZM): ಐಶ್ವರ್ಯಾ ರೈ ಬಗ್ಗೆ ಟ್ರೋಲ್ ಮಾಡಲಾಗಿದ್ದ ಮೀಮ್ ಶೇರ್ ಮಾಡಿದ ಹಿನ್ನಲೆ ಹಲವಾರು ಟೀಕೆಗಳಿಗೆ ಗುರಿಯಾದ್ದ ವಿವೇಕ್ ಓಬರಾಯ್ ಬಳಿಕ ಕ್ಷಮೆ ಕೇಳಿದ್ದಾರೆ.
ಭಾನುವಾರದಂದು ಎಕ್ಸಿಟ್ ಪೋಲ್ ಹೊರ ಬೀಳುತ್ತಿದ್ದಂತೆ ಟ್ರೋಲ್ ಒಂದು ವೈರಲ್ ಆಗಿತ್ತು. ಒಂದು ಫೋಟೋದಲ್ಲಿ 3 ಫ್ರೇಮ್ಗಳನ್ನ ಮಾಡಿ ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಸಂಬಂಧವನ್ನ ಎಕ್ಸಿಟ್ ಪೋಲ್ಗೆ ಹೋಲಿಸಿ ಟ್ರೋಲ್ ಮಾಡಲಾಗಿತ್ತು. ಈ ಫೋಟೋವನ್ನ ನೋಡಿದ ಐಶ್ವರ್ಯ ರೈ ಮಾಜಿ ಗೆಳೆಯ ವಿವೇಕ್ ಒಬೆರಾಯ್, ಇದನ್ನು ಮಜವಾಗಿ ತೆಗೆದುಕೊಂಡು, ಹಾಹಾ..!! ಕ್ರಿಯೇಟೀವ್! ಇಲ್ಲಿ ರಾಜಕೀಯ ಇಲ್ಲ.. ಜಸ್ಟ್ ಲೈಫ್.. ದೊಡ್ಡ ನಮಸ್ಕಾರ ಅಂತಾ ಟ್ವೀಟ್ ಮಾಡಿದ್ದರು. ಯಾವಾಗ ಒಬೆರಾಯ್ ಈ ರೀತಿ ಟ್ವೀಟ್ ಮಾಡಿದ್ರೋ ನಟಿ ಸೋನಂ ಕಪೂರ್ ಸೇರಿದಂರತೆ ಅನೇಕ ಬಾಲಿವುಡ್ ಸ್ಟಾರ್ಗಳು ಖಂಡಿಸಿದ್ದರು. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ತಮ್ಮ ಟ್ವೀಟ್ಗೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ವಿವೇಕ್ ಒಬೆರಾಯ್ಗೆ ನೋಟಿಸ್ ನೀಡಿದೆ.
ಇದಕ್ಕೆ ಟ್ವೀಟರ್ ಮೂಲಕ ಪ್ರತಿಕ್ರಯಿಸಿದ ವಿವೇಕ್,ಕೆಲವೊಮ್ಮೆ ಒಬ್ಬರಿಗೆ ಮೊದಲ ನೋಟದಲ್ಲಿ ತಮಾಷೆ ಎನ್ನಿಸುವ ವಿಷಯ ಮತ್ತೊಬ್ಬರಿಗೆ ಹಾಗೆ ಕಾಣಲ್ಲ. ಕಳೆದ 10 ವರ್ಷಗಳನ್ನ ನಾನು ಸುಮಾರು 2000 ಬಡ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ವ್ಯಯಿಸಿದ್ದೀನಿ. ಯಾವುದೇ ಮಹಿಳೆಗೆ ಅಗೌರವ ತೋರುವುದುದನ್ನು ನಾನು ಯೋಚಿಸಲೂ ಸಾಧ್ಯವಿಲ್ಲ ಎಂದು ವಿವೇಕ್ ಟ್ವೀಟ್ ಮಾಡಿದ್ದಾರೆ. ನನ್ನ ಟ್ವೀಟ್ನಿಂದ ಒಬ್ಬ ಮಹಿಳೆಗೆ ಬೇಸರವಾಗಿದ್ದರೂ, ಪರಿಹಾರ ಕಂಡುಕೊಳ್ಳಲೇಬೇಕು. ಕ್ಷಮಿಸಿ, ಟ್ವೀಟ್ ಡಿಲೀಟ್ ಮಾಡಿದ್ದೀನಿ ಎಂದು ಅವರು ಬರೆದುಕೊಂಡಿದ್ದಾರೆ.