ಚೆನ್ನೈ,ಮೇ18(DaijiworldNews/AZM):ತಮಿಳಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು ಸಿನಿಮಾ ಗಜಿನಿ. ಆದರೆ ಈ ಸಿನಿಮಾದಲ್ಲಿ ಅಭಿನಯಿಸಿ ತಾನು ತಪ್ಪು ನಿರ್ಧಾರ ತೆಗೆದುಕೊಂಡೆ ಎಂದು ನಟಿ ನಯನ್ ತಾರಾ ಈಗಲೂ ಕೊರಗುತ್ತಿದ್ದಾರೆ.
ಸೌತ್ ಇಂಡಿಯನ್ ಖ್ಯಾತಿ ನಟಿ ನಯನ್ ತಾರಾ ಮೊದಲು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು ಮನಸ್ಸಿನಕ್ಕರೆ ಎಂಬ ಮಲಯಾಳಂ ಸಿನಿಮಾದಲ್ಲಿ. ಮಲಯಾಳಂ ಸಿನಿಮಾಗಳ ಜೊತೆ ತೆಲುಗು, ತಮಿಳು ಮತ್ತು ಕನ್ನಡದಲ್ಲೂ ಮಿಂಚಿದ್ದ ನಯನ್ ತಾವು ಗಜಿನಿ ಸಿನಿಮಾದಲ್ಲಿ ಅಭಿನಯಿಸಿ ತಪ್ಪು ಮಾಡಿದೆ ಎಂದಿದ್ದಾರೆ.
ಹೌದು ಇಂತಹ ಒಂದು ಹೇಳಿಕೆಯನ್ನು ನಯನ್ ತಾರ ಇತ್ತೀಚೆಗೆ ನಡೆಸಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಗಜಿನಿ' ಸಿನಿಮಾದಲ್ಲಿ ಅಭಿನಯಿಸಿದ್ದು ತನ್ನ ಸಿನಿ ಕೆರಿಯರ್ನಲ್ಲೇ ನಾನು ಮಾಡಿದ ಕೆಟ್ಟ ನಿರ್ಧಾರ ಎಂದು ನಯನ್ ಹೇಳಿದ್ದಾರೆ. ಗಜಿನಿ ಸಿನಿಮಾದ ಕಥೆ ಹೇಳುವಾಗ ನನ್ನ ಪಾತ್ರದ ಬಗ್ಗೆ ಹೇಳಿದ್ದೇ ಬೇರೆ, ಆಮೇಲೆ ನಡೆದಿದ್ದೇ ಬೇರೆ. ವಿಪರ್ಯಾಸ ಎಂಬಂತೆ ನನ್ನನ್ನು ತೆರೆಯ ಮೇಲೆ ಬೇರೆಯದೇ ರೀತಿಯಲ್ಲಿ ತೋರಿಸಲಾಗಿತ್ತು. ನನ್ನ ಪಾತ್ರವನ್ನು ತುಂಬಾ ಕುಗ್ಗಿಸಿಬಿಟ್ಟಿದ್ದರು. ಆ ಸಿನಿಮಾದಲ್ಲಿ ನಾನು ನಟಿಸಬೇಕು ಎಂದು ಯೋಚಿಸಿದ್ದೇ ಕೆಟ್ಟ ನಿರ್ಧಾರವಾಗಿತ್ತು. ಅದು ಅಂದು ನನಗೆ ಗೊತ್ತಾಗಿರಲಿಲ್ಲ, ಆ ಬಳಿಕ ಎಲ್ಲವೂ ಅರ್ಥವಾಯಿತು" ಎಂದು ಕೊರಗಿದ್ದಾರೆ. ಇನ್ನು ತಾನು ನಟಿಸಿದ 'ಚಂದ್ರಮುಖಿ' ಚಿತ್ರದಲ್ಲಿ ತನ್ನದು ಸಣ್ಣ ಪಾತ್ರವಾದರೂ ಅದು ನನಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಗಜಿನಿ ಚಿತ್ರದ ಪಾತ್ರದ ಬಗ್ಗೆ ತೀರಾ ಅಸಮಾಧಾನವಾಗಿದೆ. ಆದರೆ ಅದರಿಂದ ನಾನು ಒಂದು ಪಾಠವನ್ನು ಕಲಿತಿದ್ದೇನೆ ಎಂದು ಇದೇ ವೇಳೆ ಹೇಳಿದ್ದಾರೆ
ಮುರುಗದಾಸ್ ನಿರ್ದೇಶನದ, ಸೂರ್ಯ ನಾಯಕತ್ವದ ಗಜಿನಿ ಸಿನಿಮಾದಲ್ಲಿ ಆಸಿನ್ ಮೊದಲ ಹೀರೋಯಿನ್ ಆಗಿದ್ದರೆ ನಯನತಾರಾ ಎರಡನೇ ಹೀರೋಯಿನ್ ಆಗಿ ನಟಿಸಿದ್ದರು.