ಬೆಂಗಳೂರು, ಆ 01,(DaijiworldNews/ AK): ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಇದೀಗ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.. ಪ್ಯಾನ್ ಇಂಡಿಯಾ ಸ್ಟಾರ್ ನಟಿ ಈಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ದೇಶದ ಎಲ್ಲಾ ಕಡೆ ಅಪಾರ ಅಭಿಮಾನಿಗಳನ್ನು ಪಡೆದಿರುವ ರಶ್ಮಿಕಾ ಸರ್ಪ್ರೈಸ್ ಕೊಟ್ಟಿದ್ದಾರೆ.
ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಸ್ಟಾರ್ ನಟರಿಗೆ ನಾಯಕಿಯಾಗಿ ಗೆದ್ದಿರುವ ರಶ್ಮಿಕಾ ಈಗ ಟಿವಿ ಪರದೆಗೆ ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್ಗಾ ಅಂದಕೊಂಡ್ರ ಅಲ್ಲ. ತೆಲುಗಿನ ‘ಇಂಡಿಯನ್ ಐಡಿಲ್ -3’ ಶೋಗೆ ಅತಿಥಿಯಾಗಿ ಭಾಗವಹಿಸಿದ್ದಾರೆ.
ಸಿಂಗಿಂಗ್ ಶೋನಲ್ಲಿ ಅದ್ಧೂರಿಯಾಗಿ ರಶ್ಮಿಕಾರನ್ನು ಸ್ವಾಗತಿಸಿರುವ ಪ್ರೋಮೋವೊಂದನ್ನು ವಾಹಿನಿ ರಿಲೀಸ್ ಮಾಡಿದೆ. ಇದೇ ಆಗಸ್ಟ್ 2 ಮತ್ತು 3ರಂದು ಸಂಜೆ 7 ಗಂಟೆ ಶೋ ಪ್ರಸಾರವಾಗಲಿದೆ.