ಮುಂಬೈ, ಜು.31(DaijiworldNews/AA): ಸೀತಾರಾಮಂ, ಹಾಯ್ ನಾನ್ನಾ ಸಿನಿಮಾಗಳ ಮೂಲಕ ಸೌತ್ ಫಿಲ್ಮಂ ಇಂಡಸ್ಟ್ರಿಯಲ್ಲಿ ಯಶಸ್ಸು ಕಂಡಿರುವ ನಟಿ ಮೃಣಾಲ್ ಠಾಕೂರ್ ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದ್ದು, ತೆಲುಗಿನ ಸ್ಟಾರ್ ನಟ ಪ್ರಭಾಸ್ ಗೆ ಜೋಡಿಯಾಗಿ ಆಯ್ಕೆಯಾಗಿದ್ದಾರೆ.
ತೆಲುಗು ಹಾಗೂ ಬಾಲಿವುಡ್ನಲ್ಲಿ ಕಾಲೂರುತ್ತಿರುವ ನಟಿ ಮೃಣಾಲ್ ಠಾಕೂರ್ಗೆ ಇದೀಗ ತೆಲುಗಿನಲ್ಲಿ ಗೋಲ್ಡನ್ ಚಾನ್ಸ್ ದೊರೆತಿದೆ. ಸುಂದರ ಪ್ರೇಮಕಥೆಯಲ್ಲಿ ಪ್ರಭಾಸ್ಗೆ ನಾಯಕಿಯಾಗಿ ಮೃಣಾಲ್ ನಟಿಸಲಿದ್ದಾರೆ. 'ಸೀತಾರಾಮಂ' ನಿರ್ದೇಶಕ ಹನು ರಾಘವಪುಡಿ ಈ ಸಿನಿಮಾಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಪ್ರಭಾಸ್ಗೆ ನಾಯಕಿಯಾಗಿ ಇದೇ ಮೊದಲ ಬಾರಿಗೆ ಮೃಣಾಲ್ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರ ಕಾಂಬಿನೇಷನ್ ಚಿತ್ರವು ಇದೇ ಸೆಪ್ಟೆಂಬರ್ನಿಂದ ಪ್ರಾರಂಭವಾಗಲಿದೆ. ಈ ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.