ಮುಂಬೈ, ಜು.30(DaijiworldNews/AA): ಬಾಲಿವುಡ್ ನಟ ಶಾರುಖ್ ಖಾನ್ಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿದ್ದು, ಸರ್ಜರಿ ಮಾಡಿಸಿಕೊಳ್ಳಲು ಬಾದ್ಶಾ ಅಮೇರಿಕಾಗೆ ತೆರಳಲಿದ್ದಾರೆ.
ಮೂಲಗಳ ಪ್ರಕಾರ ಸೋಮವಾರ ಶಾರುಖ್ ಮುಂಬೈ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿಯೇ ಚಿಕಿತ್ಸೆ ಪಡೆಯಲು ನಿರ್ಧಾರ ಮಾಡಿದ್ದರು. ಆದರೆ ಅಂದುಕೊಂಡಂತೆ ಆಗಲಿಲ್ಲ. ಹೀಗಾಗಿ ಅವರು ಅಮೇರಿಕಾಗೆ ಹೊರಡಲಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಅವರು ಅಮೆರಿಕಾಗೆ ತೆರಳಲಿದ್ದು, ಸದ್ಯದಲ್ಲೇ ಶಾರುಖ್ ಸಜ್ರಿಗೆ ಒಳಗಾಗಲಿದ್ದಾರೆ. ಆದರೆ ಅವರ ಕಣ್ಣಿಗೆ ಏನಾಗಿದೆ? ಅವರ ಆರೋಗ್ಯದ ಸಮಸ್ಯೆ ಏನು ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಹೇಳಲಾಗಿದೆ.