ಮುಂಬೈ, ಜು.28(DaijiworldNews/AA): ಬಾಲಿವುಡ್ ಬೆಡಗಿ ನಟಿ ದೀಪಿಕಾ ಪಡುಕೋಣೆ ಅವರು ಬಹು ಬೇಡಿಕೆಯ ನಟಿಯಾಗಿದ್ದು, ಸದ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಹುಟ್ಟುವ ಮಗುವಿಗಾಗಿ ಅಂತರಾಷ್ಟ್ರೀಯ ವೆಬ್ ಸ್ಟೋರಿ 'ದಿ ವೈಟ್ ಲೋಟಸ್' ಮೂರನೇ ಸೀಸನ್ ಆಫರ್ ತಿರಸ್ಕರಿಸಿದ್ದಾರೆ.
ನಟಿಯು ಸೆಪ್ಟೆಂಬರ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದು, ಮಗುವನ್ನು ನೋಡಿಕೊಳ್ಳಲು ನಟಿ ಈ ಪ್ರಾಜೆಕ್ಟ್ ಅನ್ನು ತಿರಸ್ಕರಿಸಿದ್ದಾರೆ.ನಟಿ ತನ್ನ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಿದ್ದಾರೆ. ಹೀಗಾಗಿ ದೀಪಿಕಾ ಯಾವುದೇ ಹೊಸ ಪ್ರಾಜೆಕ್ಟ್ಗೆ ಸಹಿ ಹಾಕುತ್ತಿಲ್ಲ ಎನ್ನಲಾಗಿದೆ.
ದೀಪಿಕಾ ಯಾರ ಸಹಾಯವೂ ಇಲ್ಲದೆ ಮಗುವನ್ನು ನೋಡಿಕೊಳ್ಳಲು ಬಯಸಿದ್ದಾರೆ. ಅಂದರೆ ಇತರ ಸೆಲೆಬ್ರಿಟಿಗಳಂತೆ ದೀಪಿಕಾ ತನ್ನ ಮಗುವನ್ನು ನೋಡಿಕೊಳ್ಳಲು ದಾದಿಯರನ್ನು ನೇಮಿಸಿಕೊಳ್ಳುವುದಿಲ್ಲ. ಹೆರಿಗೆಯ ಬಳಿಕವೂ ಮಗುವಿನ ಪಾಲನೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧಾರ ಮಾಡಿದ್ದಾರಂತೆ. ಜೊತೆಗೆ ಪತಿ ರಣವೀರ್ ಸಿಂಗ್ ಅವರ ಸಹಾಯ ಕೇಳುವುದಿಲ್ಲವಂತೆ. ತಮ್ಮ ಮಗುವನ್ನು ಸಂಪೂರ್ಣವಾಗಿ ತಾವೇ ನೋಡಿಕೊಳ್ಳಲು ಬಯಸಿದ್ದಾರೆ. ತಾಯಿಯಾದ ನಂತರ ಕೆಲ ವರ್ಷ ದೀಪಿಕಾ ಬಾಲಿವುಡ್ನತ್ತ ಮುಖ ಮಾಡದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.