ಮುಂಬೈ, ಜು.27(DaijiworldNews/AA): ಕ್ಷಮಿಸಿ, ಇನ್ಮುಂದೆ ಅನಿಮಲ್ ರೀತಿಯ ಸಿನಿಮಾ ಮಾಡುವುದಿಲ್ಲ ಎಂದು ಬಾಲಿವುಡ್ ನಟ ರಣಬೀರ್ ಕಪೂರ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ನಟ ರಣಬೀರ್ ಕಪೂರ್ ಅನಿಮಲ್ ಸಿನಿಮಾ ಬಗೆಗಿನ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗದ ಅನೇಕರು ಈ ಸಿನಿಮಾದಿಂದ ತಮಗೆ ನಿರಾಸೆ ಆಯಿತು ಅಂತ ಹೇಳಿದರು. ನಾನು ಅವರ ಬಳಿ ಕ್ಷಮೆ ಕೇಳಿದೆ. ಹಾಗಂತ ನಾನು ಅವರ ಮಾತನ್ನು ನಿಜಕ್ಕೂ ಒಪ್ಪಿಕೊಂಡಿಲ್ಲ. ಯಾಕೆಂದರೆ, ನಾನು ಈಗ ಯಾರೊಂದಿಗೂ ವಾದ ಮಾಡಲು ಇಷ್ಟವಿಲ್ಲದ ಹಂತದಲ್ಲಿ ಇದ್ದೇನೆ. ಒಂದು ವೇಳೆ ನಿಮಗೆ ನನ್ನ ಕೆಲಸ ಇಷ್ಟ ಆಗಿಲ್ಲ ಎಂದರೆ ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ. ಮುಂದಿನ ಬಾರಿ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡುವೆ ಅಂತ ಹೇಳುತ್ತೇನೆ ಎಂದು ಹೇಳಿದ್ದಾರೆ.
2023ರಲ್ಲಿ ಬಿಡುಗಡೆಯಾಗಿದ್ದ ಅನಿಮಲ್ ಸಿನಿಮಾಗೆ ದೊಡ್ಡ ಗೆಲುವು ಸಿಕ್ಕಿತ್ತು. ಅದರೊಂದಿಗೆ ಬಹಳಷ್ಟು ಟೀಕೆಯೂ ವ್ಯಕ್ತವಾಗಿತ್ತು. ಇದೀಗ ಮೊದಲ ಬಾರಿಗೆ ಈ ಸಿನಿಮಾ ಬಗ್ಗೆ ಕೇಳಿಬಂದ ಟೀಕೆಗಳ ಬಗ್ಗೆ ರಣಬೀರ್ ಕಪೂರ್ ಪ್ರತಿಕ್ರಿಯಿಸಿದ್ದಾರೆ.