ಮುಂಬೈ, ಜು 25(DaijiworldNews/ AK): ಕನ್ನಡದ ಹೆಬ್ಬುಲಿ ಸಿನಿಮಾದ ನಟಿ ಅಮಲಾ ಪೌಲ್ ಇತ್ತೀಚೆಗೆ ಕೊಚ್ಚಿಯ ಕಾಲೇಜುವೊಂದಕ್ಕೆ ಸಿನಿಮಾ ಪ್ರಚಾರಕ್ಕಾಗಿ ಭಾಗಿಯಾಗಿದ್ದರು. ಈ ವೇಳೆ, ಅವರು ಧರಿಸಿದ ಬಟ್ಟೆ ಬಗ್ಗೆ ಭಾರೀ ಟ್ರೋಲ್ ಆಗಿದ್ದರು. ಈ ಬಗ್ಗೆ ನಟಿ ಮಾತನಾಡಿ, ಸಮಸ್ಯೆ ಇರೋದು ಬಟ್ಟೆಯಲ್ಲಿ ಅಲ್ಲ, ಕ್ಯಾಮೆರಾಮ್ಯಾನ್ಗಳಲ್ಲಿ ಎಂದು ಖಡಕ್ ಉತ್ತರ ನೀಡಿದ್ದಾರೆ.
ನನಗೆ ಯಾವ ಬಟ್ಟೆ ಆರಾಮ ಎನಿಸುತ್ತದೆಯೋ ಅದನ್ನು ಮಾತ್ರ ಧರಿಸುವೆ. ಸಮಸ್ಯೆ ಇರೋದು ಬಟ್ಟೆಯಲ್ಲ, ಕ್ಯಾಮೆರಾಗಳು ಹೇಗೆ ನನ್ನ ಉಡುಗೆ ಶೈಲಿಯನ್ನು ತೋರಿಸುತ್ತಾರೆ ಎಂಬುದರಲ್ಲಿ. ನಾನು ಎಲ್ಲ ರೀತಿಯ ಡ್ರೆಸ್ನ ಹಾಕುತ್ತೇನೆ ಎಂದು ಹೇಳಿದ್ದಾರೆ.
ನನ್ನ ಬಟ್ಟೆಯಿಂದಾಗಿ ವಿದ್ಯಾರ್ಥಿಗಳು ಮುಜುಗರಕ್ಕೆ ಒಳಗಾಗಿಲ್ಲ. ನಾನು ಸಾಂಪ್ರದಾಯಿಕ ಸೇರಿದಂತೆ ಎಲ್ಲಾ ರೀತಿಯ ಉಡುಪುಗಳನ್ನು ಧರಿಸುತ್ತೇನೆ. ಆ ಉಡುಪನ್ನು ಧರಿಸುವ ಮೂಲಕ, ವಿದ್ಯಾರ್ಥಿಗಳಲ್ಲಿ ಅವರ ಡ್ರೆಸ್ಸಿಂಗ್ ಆಯ್ಕೆಗಳ ಬಗ್ಗೆ ವಿಶ್ವಾಸವನ್ನು ತುಂಬಲು ನಾನು ಬಯಸುತ್ತೇನೆ ಎಂದು ಟ್ರೋಲಿಗರಿಗೂ ನಟಿ ತಿರುಗೇಟು ನೀಡಿದ್ದಾರೆ.
ಅಮಲಾ ನಟನೆಯ ಲೆವೆಲ್ ಕ್ರಾಸ್ ಎಂಬ ಸಿನಿಮಾ ರಿಲೀಸ್ ಆಗಿದೆ. ಹೆರಿಗೆಯ ನಂತರ ಮತ್ತೆ ಈ ಚಿತ್ರದ ಮೂಲಕ ನಟಿ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.