ಮುಂಬೈ, ಜು 25 (DaijiworldNews/ AK): ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಮತ್ತೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹೌದು ಪ್ರಣಿತಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.ಹೊಸ ಫೋಟೋಶೂಟ್ವೊಂದನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚುಕೊಳ್ಳುವ ಮೂಲಕ ಪ್ರೆಗ್ನೆನ್ಸಿ ಸುದ್ದಿಯನ್ನು ತಿಳಿಸಿದ್ದಾರೆ.
ರೌಂಡ್ 2 ಪ್ಯಾಂಟ್ಗಳು ಇನ್ನೂ ಮುಂದೆ ಹೊಂದಿಕೆಯಾಗುವುದಿಲ್ಲ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರೆಗ್ನೆನ್ಸಿ ವಿಷಯ ತಿಳಿಸಿದ್ದಾರೆ. ನಟಿಯ ಪೋಸ್ಟ್ಗೆ ವಿವಿಧ ರೀತಿಯ ಕಾಮೆಂಟ್ಗಳು ಹರಿದು ಬರುತ್ತಿವೆ.
ಲಾಕ್ಡೌನ್ ವೇಳೆ 2021ರಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ಪ್ರಣಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2022ರ ಜೂನ್ನಲ್ಲಿ ಹೆಣ್ಣು ಮಗವಿಗೆ ನಟಿ ಜನ್ಮ ನೀಡಿದ್ದಾರೆ. ಈಗ 2ನೇ ಮಗುವಿನ ನಿರೀಕ್ಷೆಯಲ್ಲಿ ದಂಪತಿಗಳು.