ಬೆಂಗಳೂರು, ಜು.24(DaijiworldNews/AA): ಕೆಜಿಎಫ್ ಚಾಪ್ಟರ್ 1 ಹಾಗೂ 2 ದೇಶದಾದ್ಯಂತ ದೂಳೆಬ್ಬಿಸಿತ್ತು. ಇದೀಗ ಕೆಜಿಎಫ್ 3 ಸಿನಿಮಾ ಬರಲಿದ್ದು, ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ತಮಿಳಿನ ಸೂಪರ್ ಸ್ಟಾರ್ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಕೆಜಿಎಫ್ ಚಾಪ್ಟರ್ 3 ಬರಲಿದೆ ಎಂದು ಹೊಂಬಾಳೆ ಫಿಲಮ್ಸ್ ತಿಳಿಸಿದೆ. ಆದರೆ ಇದೀಗ ನಟ ಯಶ್ ಜೊತೆಗೆ ತಮಿಳಿನ ಸೂಪರ್ ಸ್ಟಾರ್ ಅಜಿತ್ ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಸಂಸ್ಥೆ ನಟ ಅಜಿತ್ ಕುಮಾರ್ ಜೊತೆಗೆ ಮಾತನಾಡಿದ್ದು, ಅವರೂ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಕಪ್ಪು ಗಡ್ಡದ ವಿರುದ್ಧ ಅಜಿತ್ರ ಬಿಳಿ ಗಡ್ಡದ ಕಾಂಬಿನೇಶನ್ ತೆರೆಯ ಮೇಲೆ ಭರ್ಜರಿಯಾಗಿರಲಿದೆ. ಪ್ರೇಕ್ಷಕರ ಕಣ್ಣಿಗೆ ಹಬ್ಬವಾಗಿರಲಿದೆ ಎಂದು ಹೇಳಲಾಗುತ್ತಿದೆ. 'ಕೆಜಿಎಫ್ 3' ಸಿನಿಮಾದ ಚಿತ್ರೀಕರಣ 2025 ರಲ್ಲಿ ಪ್ರಾರಂಭವಾಗಲಿದ್ದು, 2026ರ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.