ಬೆಂಗಳೂರು, ಜು.22(DaijiworldNews/AA): ಸ್ಯಾಂಡಲ್ವುಡ್ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮಂಥೆರೋ ಜೋಡಿ ಮದುವೆಯಾಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಇದೀಗ ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ.
ಕಪ್ಪು ಬಣ್ಣ ಮತ್ತು ಲೈಟ್ ಬಣ್ಣದ ಉಡುಗೆಯಲ್ಲಿ ಚೆಂದದ ಫೋಟೋಶೂಟ್ ಮಾಡಿಸಿರುವ ತರುಣ್ ಹಾಗೂ ಸೋನಲ್ ಮದುವೆಯಾಗುವ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದ ವದಂತಿಗಳಿಗೆ ಈ ಜೋಡಿ ತೆರೆ ಎಳೆದಿದ್ದಾರೆ.
ಇದೇ ಆಗಸ್ಟ್ 10ರಂದು ಸೋನಲ್ ಮತ್ತು ತರುಣ್ ಸುಧೀರ್ ಆರತಕ್ಷತೆ ನಡೆಯಲಿದ್ದು, ಆಗಸ್ಟ್ 11ರಂದು ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ. ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್ನಲ್ಲಿ ಇವರಿಬ್ಬರ ಮದುವೆ ನಡೆಯಲಿದೆ.
ತಮ್ಮ ಮದುವೆ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ತರುಣ್, ನಿರ್ದೇಶಕರಿಗೊಬ್ಬ ನಟಿ ಸಿಕ್ರು. ನಟಿಗೊಬ್ಬ ನಿರ್ದೇಶಕ ಸಿಕ್ರು ಎಂದು ಪೋಸ್ಟ್ ಮಾಡಿದ್ದಾರೆ. ನಮ್ಮ ಕಥೆಯ ಶುಭಾರಂಭಕ್ಕೆ ನಿಮ್ಮ ಆಶೀರ್ವಾದವಿರಲಿ. ಮದುವೆ ಆಗಸ್ಟ್ 11ಕ್ಕೆ ಎಂದು ತರುಣ್ ಸುಧೀರ್ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.