ಮುಂಬೈ, ಜು.21(DaijiworldNews/AA): ಲೆನ್ಸ್ ಸರಿಯಾಗಿ ಧರಿಸದ ಕಾರಣ ಬಹುಭಾಷಾ ನಟಿ ಜಾಸ್ಮಿನ್ ಭಾಸಿನ್ ಅವರು ಎಡವಟ್ಟು ಮಾಡಿಕೊಂಡಿದ್ದು, ಇದೀಗ ದೃಷ್ಟಿ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ.
ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡಿರುವ ನಟಿ ಜಾಸ್ಮಿನ್ ಅವರು, ಲೆನ್ಸ್ ಸರಿಯಾಗಿ ಧರಿಸದ ಕಾರಣ ಕಣ್ಣು ಕಾಣಿಸುತ್ತಿಲ್ಲ. ನು ತುಂಬಾ ನೋವು ಅನುಭವಿಸುತ್ತಿದ್ದೇನೆ. ನಾನು ಮುಂದಿನ ನಾಲ್ಕೈದು ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಲೆನ್ಸ್ ಸರಿಯಾಗಿ ಧರಿಸದ ಕಾರಣ ಜಾಸ್ಮಿನ್ ಭಾಸಿನ್ ಕಾರ್ನಿಯಲ್ ಗೆ ಹಾನಿಯುಂಟಾಗಿದ್ದು, ನಟಿಯ ಕಣ್ಣಿಗೆ ಬ್ಯಾಂಡೇಜ್ ಹಾಕಲಾಗಿದೆ.
ಜುಲೈ 17 ರಂದು, ಲೆನ್ಸ್ ಧರಿಸಿದ ಬಳಿಕ ಜಾಸ್ಮಿನ್ ಗೆ ಕಣ್ಣುಗಳು ತುಂಬಾ ನೋಯಲಾರಂಭಿಸಿದ್ದವು. ಆದಾಗ್ಯೂ, ಅವರು ಕೆಲಸ ಮಾತ್ರ ಮುಂದುವರಿಸಿದ್ದರು. ತಕ್ಷಣ ವೈದ್ಯರ ಬಳಿ ತೆರಳಲು ಸಾಧ್ಯವಾಗಿರಲಿಲ್ಲ. ಇದಲ್ಲದೆ, ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಮದರಲ್ಲಿ ಅವರು ಸನ್ಗ್ಲಾಸ್ ಧರಿಸಿದ್ದರು. ಬಳಿಕ ಅವರಿಗೆ ಕಣ್ಣು ನೋವಾಗಿ, ಕಣ್ಣು ಕಾಣಿಸದಂತಾಗಿ ವೈದ್ಯರ ಬಳಿ ತೆರಳಿದ್ದಾರೆ. ಇದೀಗ ಅವರು ಮುಂಬೈಗೆ ಆಗಮಿಸಿ ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ.