ಬೆಂಗಳೂರು, ಜು 16(DaijiworldNews/ AK): ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕೊನೆಯ ಸಿನಿಮಾ ಬಂದಿದ್ದು 2022ರಲ್ಲಿ. ಇದಾದ ಬಳಿಕ ಅವರ ಯಾವ ಸಿನಿಮಾವೂ ರಿಲೀಸ್ ಆಗಿಲ್ಲ. ಇದೀಗ ಸುದೀ ಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಯಾವಾಗ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದ ಟೀ ಸರ್ ರಿಲೀಸ್ ಆಗಿದ್ದು, ಆದಷ್ಟು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ ಎಂದಿದೆ ಚಿತ್ರತಂಡ.‘ಮ್ಯಾಕ್ಸ್’ ಸುದೀಪ್ ನಟನೆಯ 46ನೇ ಸಿನಿಮಾವಾಗಿದ್ದು, 2023ರಲ್ಲಿ ಸಿನಿಮಾಸೆಟ್ಟೇ ರಿತ್ತು. ವಿಜಯ್ ಕಾರ್ತಿಕೇ ಯ ನಿರ್ದೇಶನದ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಾಣುತ್ತಿದೆ.
ಸಿನಿಮಾದ ಬಹುತೇಕ ಚಿತ್ರೀಕರಣ ತಮಿಳುನಾಡಿನ ಮಹಾಬಲಿಪುರಂನಲ್ಲಿ ಹಾಕಿದ್ದ ಸೆಟ್ನಲ್ಲಿ ನಡೆದಿತ್ತು. ‘ಜೈಲರ್’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದ
ಕೆವಿನ್ ಕುಮಾರ್ ‘ಮ್ಯಾಕ್ಸ್’ನ ಕ್ಲೈ ಮ್ಯಾಕ್ಸ್ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ವಿಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್.ತನು ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.